ADVERTISEMENT

ನಕಲಿ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ- ಬಿ.ಸಿ. ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 8:20 IST
Last Updated 28 ಜೂನ್ 2022, 8:20 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ಬೆಂಗಳೂರು: 'ಯಾವುದೇ ಕಾರಣಕ್ಕೂ ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಆಗಬಾರದು. ರೈತರಿಗೆ ಮೋಸ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಿ' ಎಂದು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.

ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳ ಸಭೆ ನಡೆಸಿದ ಅವರು, 'ರೈತರಿಗೆ ತೊಂದರೆ, ಅನಾಹುತ ಆಗುವ ಮೊದಲೇ ಎಚ್ಚರ ವಹಿಸಿ. ಕೃಷಿ ಜಾಗೃತವಕೋಶವನ್ನುಮತ್ತಷ್ಟು ಚುರುಕುಗೊಳಿಸಲಾಗುವುದು. ಇಲಿ ಹಿಡಿಯದೇ ಹುಲಿಗೆ ಗುರಿ ಇಡಬೇಕು' ಎಂದರು.

'ಮಾರ್ಕೆಟಿಂಗ್ ಪರವಾನಗಿ ಇಲ್ಲದೇ ಯಾವುದೇ ಉತ್ಪನ್ನ ಮಾರುವಂತಿಲ್ಲ. ಕಂಪನಿ ಎಷ್ಟೇ ದೊಡ್ಡದಾದರೂ ನೋಟಿಸ್ ನೀಡಿ. ನಕಲಿ ಮಾರಾಟ ಜಾಲದ ಬುಡವನ್ನೇ ಕತ್ತರಿಸಿ' ಎಂದೂ ಅಧಿಕಾರಿಗಳಿಗೆ ಹೇಳಿದರು.

ADVERTISEMENT

'ನಕಲಿ ಬೀಜ ಗೊಬ್ಬರ ಮಾರಾಟ ತಡೆಗೆ ಕೃಷಿ ವಿಚಕ್ಷಣಾ ದಳವನ್ನು ವಿಸ್ತರಿಸಲಾಗುವುದು. ಹೊಸದಾಗಿ ಎರಡು ವಿಚಕ್ಷಣಾ ದಳದಕಚೇರಿ ಕಲಬುರಗಿ ಮತ್ತು ಮೈಸೂರುಜಿಲ್ಲೆಗಳಲ್ಲಿ ಆರಂಭವಾಗಲಿದ್ದು, ಮೈಸೂರಿನಲ್ಲಿ ಜುಲೈ 5ರಂದು ಕಚೇರಿ ಆರಂಭವಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.