ADVERTISEMENT

ಸುವರ್ಣಸೌಧ ಟೂರಿಂಗ್‌ ಟಾಕೀಸ್ ಆಗಿದೆ: ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 14:56 IST
Last Updated 13 ಡಿಸೆಂಬರ್ 2023, 14:56 IST
ಅಭಯ ಪಾಟೀಲ
ಅಭಯ ಪಾಟೀಲ   

ವಿಧಾನಸಭೆ: ವರ್ಷದಲ್ಲಿ 10 ದಿನ ಕಲಾಪ ನಡೆಯುವುದರಿಂದ ಸುವರ್ಣ ವಿಧಾನಸೌಧವು ‘ಟೂರಿಂಗ್ ಟಾಕೀಸ್‌’ ರೀತಿಯಾಗಿದೆ ಎಂದು ಬಿಜೆಪಿಯ ಅಭಯ ಪಾಟೀಲ ಹೇಳಿದರು.

ಉತ್ತರ ಕರ್ನಾಟಕದ ಸಮಸ್ಯೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಕಲಾಪ ನಡೆಯುವ ವೇಳೆ ಕೆಲವು ಶಾಸಕರು ಗೋವಾ ಮತ್ತು ದೇವಸ್ಥಾನಗಳ ಸುತ್ತಾಟದಲ್ಲೇ ನಿರತರಾಗಿರುತ್ತಾರೆ. ಸುವರ್ಣಸೌಧ ನಿರ್ಮಾಣದ ಆಶಯ ಈಡೇರುತ್ತಿಲ್ಲ ಎಂದರು.

‘ಗೋವಾಕ್ಕೆ ಹೋಗುವ ರಸ್ತೆಗಳ ಗಡಿಯಲ್ಲಿ ಶಾಸಕರನ್ನು ನಿರ್ಬಂಧಿಸಿ, ಅಲ್ಲಿಂದಲೇ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಿ’ ಎಂದು ಬಿಜೆಪಿಯ ಎಸ್.ಆರ್. ವಿಶ್ವನಾಥ್‌ ಸಲಹೆ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್‌, ‘ನಮ್ಮ ಸ್ವಾಭಿಮಾನದ ಶಕ್ತಿ ಕೇಂದ್ರ ಇದು. ಇದನ್ನು ಕಟ್ಟುವ ಹಿಂದೆ ಬೇರೆ ಬೇರೆ ಉದ್ದೇಶಗಳೂ ಇದ್ದವು. ಕಟ್ಟಿದ ಮೇಲೆ ಸಮಸ್ಯೆಗಳು ಕಡಿಮೆಯಾಗಿದ್ದು, ಅಭಿವೃದ್ಧಿಯೂ ಆಗಿದೆ. ಈಗ ಏನು ಮಾಡಬೇಕು ಹೇಳಿ’ ಎಂದರು.

ಮಾತು ಮುಂದುವರಿಸಿದ ಅಭಯ ಪಾಟೀಲ, ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಬೇಕು. ವಿಧಾನಮಂಡಲದ ಸಮಿತಿಗಳ ಸಭೆಗಳನ್ನು ಇಲ್ಲಿಯೇ ನಡೆಸಿ ಎಂದು ಸಲಹೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.