ADVERTISEMENT

ದುರಸ್ತಿಗಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ರನ್‍ವೇ ಬಂದ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 7:56 IST
Last Updated 30 ಜೂನ್ 2020, 7:56 IST
ರನ್‌ವೇ–ಸಾಂದರ್ಭಿಕ ಚಿತ್ರ
ರನ್‌ವೇ–ಸಾಂದರ್ಭಿಕ ಚಿತ್ರ   

ಬೆಂಗಳೂರು: ದುರಸ್ತಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದ ಒಂದು ರನ್‌ವೇ ಅನ್ನು ಸದ್ಯಕ್ಕೆಮುಚ್ಚಲಾಗಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉತ್ತರದ ರನ್‌ವೇ ಮೇಲ್ಮೈ ದುರಸ್ತಿ ಮತ್ತು ಸೆಂಟರ್‌ ಲೈನ್‌ ದೀಪಗಳನ್ನು ಅಳವಡಿಸುವ ‌ಕೆಲಸಗಳು ಕಳೆದ ವಾರ (ಜೂನ್‌ 22) ಆರಂಭವಾಗಿವೆ.ರನ್‌ವೇ ಪುನರ್ವಸತಿ ಕಾರ್ಯ 2020ರ ಅಂತ್ಯದ ವೇಳೆ ಪೂರ್ಣವಾಗುವ ನಿರೀಕ್ಷೆ ಇದೆ.

ಅಲ್ಲಿಯವರೆಗೆ ಎಲ್ಲ ವಿಮಾನಗಳು ದಕ್ಷಿಣದ ರನ್‌ವೇನಿಂದ ಹಾರಾಟ ನಡೆಸಲಿವೆ.2021ರ ಆರಂಭದ ವೇಳೆಗೆ ಎರಡೂ ರನ್‌ವೇಗಳನ್ನು ಬಳಸಲಾಗುವುದುಎಂದುಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ತಿಳಿಸಿದೆ.

ADVERTISEMENT

ದುರಸ್ತಿಯಿಂದ ಉತ್ತರದ ರನ್‌ವೇ ಕಾರ್ಯಾಚರಣೆ ಗುಣಮಟ್ಟ ಮತ್ತಷ್ಟು ಸುಧಾರಿಸಲಿದೆ. ಮಂದ ಬೆಳಕು ಮತ್ತು ಹವಾಮಾನ ವೈಪರೀತ್ಯ ಪರಿಸ್ಥಿತಿಯಲ್ಲಿ ಈ ಎರಡೂ ‘ರನ್‌ವೇ’ಗಳಲ್ಲಿ ಕಾರ್ಯಾಚರಣೆ ನಡೆಸಬಹುದಾಗಿದೆ ಎಂದು ಬಿಐಎಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.