ADVERTISEMENT

ಲೋಕಸಭಾ ಕ್ಷೇತ್ರ ಪರಿಚಯ: ಬೆಂಗಳೂರು ಗ್ರಾಮಾಂತರ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:40 IST
Last Updated 3 ಮೇ 2019, 14:40 IST
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಕ್ಷೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಕ್ಷೆ   

ರಾಮನಗರ: ಸದ್ಯ ಕಾಂಗ್ರೆಸ್‌ನ ಭದ್ರಕೋಟೆ ಆಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಶಕ್ಕೆ ಬಿಜೆಪಿ ಯತ್ನಿಸುತ್ತಿದೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ಕನಕಪುರ ಲೋಕಸಭಾ ಕ್ಷೇತ್ರದ ಬದಲು ಬೆಂಗಳೂರು ಗ್ರಾಮಾಂತರ ಎಂಬ ಹೊಸ ಕ್ಷೇತ್ರ ಸೃಷ್ಟಿಯಾಯಿತು.

ಅಲ್ಲಿಂದ ಎರಡು ಸಾರ್ವತ್ರಿಕ ಚುನಾವಣೆಗಳು, ಒಂದು ಉಪ ಚುನಾವಣೆ ನಡೆದಿದೆ. ಕಾಂಗ್ರೆಸ್‌ನಿಂದ ಹಾಲಿ ಸಂಸದ ಡಿ.ಕೆ.ಸುರೇಶ್‌ ಅಭ್ಯರ್ಥಿ ಆಗುವುದು ಖಚಿತ.

ADVERTISEMENT

ಬಿಜೆಪಿ ಇಲ್ಲಿ ಇನ್ನೂ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಯಾರ ಹೆಸರು ಆಖೈರುಗೊಳ್ಳಲಿದೆ ಎಂಬುದು ಸದ್ಯಕ್ಕೆ ನಿಗೂಢ.

ಆಕಾಂಕ್ಷಿಗಳು
ಕಾಂಗ್ರೆಸ್‌– ಡಿ.ಕೆ. ಸುರೇಶ್‌
ಬಿಜೆಪಿ: ಸಿ.ಪಿ.ಯೋಗೇಶ್ವರ್‌, ತುಳಸಿ ಮುನಿರಾಜುಗೌಡ, ಎಂ.ರುದ್ರೇಶ್‌
ಮತದಾರರ ಸಂಖ್ಯೆ:


ವಿಧಾನಸಭೆ ಕ್ಷೇತ್ರವಾರು ಬಲಾಬಲ
ಕಾಂಗ್ರೆಸ್‌–4: ಕನಕಪುರ, ರಾಜರಾಜೇಶ್ವರಿನಗರ, ಆನೇಕಲ್‌, ಕುಣಿಗಲ್‌
ಜೆಡಿಎಸ್‌–3: ರಾಮನಗರ, ಚನ್ನಪಟ್ಟಣ, ಮಾಗಡಿ
ಬಿಜೆಪಿ–1: ಬೆಂಗಳೂರು ದಕ್ಷಿಣ

ಹಿಂದಿನ ಚುನಾವಣೆಗಳ ಫಲಿತಾಂಶ
2009 -ವಿಜೇತರು: ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌)
ಗೆಲುವಿನ ಅಂತರ: 1,30,275

ಶೇಕಡವಾರು ಮತಗಳಿಕೆ:
ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌); 44.73
ಸಿ.ಪಿ.ಯೋಗೇಶ್ವರ್‌ (ಬಿಜೆಪಿ): 32.92
ತೇಜಸ್ವಿನಿ ಗೌಡ (ಕಾಂಗ್ರೆಸ್‌): 17.48
ಇತರೆ: 4.87

–––––

2014
ವಿಜೇತರು: ಡಿ.ಕೆ.ಸುರೇಶ್‌
ಗೆಲುವಿನ ಅಂತರ: 2,31,480

ಶೇಕಡವಾರು ಮತಗಳಿಕೆ:
ಡಿ.ಕೆ.ಸುರೇಶ್‌ (ಕಾಂಗ್ರೆಸ್‌): 44.85
ಪಿ. ಮುನಿರಾಜುಗೌಡ (ಬಿಜೆಪಿ): 28.95
ಪ್ರಭಾಕರ ರೆಡ್ಡಿ (ಜೆಡಿಎಸ್‌): 21.84
ಇತರರು: 4.36

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.