ADVERTISEMENT

ಬೆಂಗಳೂರು ಟೆಕಿಯ ಕ್ವಾರಂಟೈನ್ ಡ್ಯಾನ್ಸ್ ವೈರಲ್, ನೆಟ್ಟಿಗರಿಂದ ಪ್ರಶಂಸೆಯ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 11:47 IST
Last Updated 13 ಏಪ್ರಿಲ್ 2020, 11:47 IST
ಬೆಂಗಳೂರು ಟೆಕಿಯ ವಿಡಿಯೊದ ದೃಶ್ಯ
ಬೆಂಗಳೂರು ಟೆಕಿಯ ವಿಡಿಯೊದ ದೃಶ್ಯ   
""
""
""
""

ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಮನೆಯಲ್ಲೇ ಸಿಲುಕಿಕೊಂಡಿರುವ ಜನರು ಮನರಂಜನೆಗಾಗಿ ವಿಭಿನ್ನ ಹಾದಿಯನ್ನು ಆರಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕ್ವಾರಂಟೈನ್ ಡ್ಯಾನ್ಸ್‌ನ ಸವಾಲು ಕೂಡ ಯಶಸ್ವಿಯಾಗಿತ್ತು. ಅದನ್ನೇ ಗಮನದಲ್ಲಿಟ್ಟುಕೊಂಡ ಬೆಂಗಳೂರಿನ ಟೆಕಿ ಮಾಡಿದ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು ಮೂಲದ 24 ವರ್ಷದ ಎಂಜಿನಿಯರಿಂಗ್ ಡಿಸೈನರ್ ಆದಿತ್ಯ ಕೋಟಾ ಬದ್ರಿನಾಥ್ ಅವರು ಲಾಕ್‌ಡೌನ್ ಸಮಯದಲ್ಲಿ ವಿಡಿಯೊವೊಂದನ್ನು ಮಾಡಿದ್ದಾರೆ. ಜ್ಯಾಕ್ ಸ್ಟ್ಯಾಬರ್ ಅವರ ‘ಬಟರ್‌ಕ್ಯೂಪ್’ ಹಾಡಿಗೆ ನೃತ್ಯ ಮಾಡಿದ್ದಾರೆ. ಮುಖ ಮತ್ತು ಹೊಟ್ಟೆಯವರೆಗಿನ ವಿಭಿನ್ನ ಕಟೌಟ್‌ಗಳನ್ನು ನೃತ್ಯ ಮಾಡುತ್ತಿರುವ ವಿಡಿಯೊಗೆ ಸರಿಹೊಂದಿಸಿದ್ದಾರೆ. ಇದೀಗ ಈ ನೃತ್ಯ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರಿಂದ ಪ್ರಶಂಸೆಗೆ ಕಾರಣವಾಗಿದೆ.

ಈ ಕುರಿತು ಖಾಸಗಿ ವೆಬ್‌ಸೈಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಆದಿತ್ಯ, ನನ್ನ ಫೋನ್ ಕ್ಯಾಮರಾದಲ್ಲಿ ನೃತ್ಯವನ್ನು ರೆಕಾರ್ಡ್ ಮಾಡಿದೆ. ಬಳಿಕ ಅಡೋಬ್ ಇಲ್ಯುಸ್ಟ್ರೇಟರ್‌ನಲ್ಲಿ ಮುಖದ ಕಟೌಟ್‌ಗಳನ್ನು ಜೋಡಿಸಿದೆ ಮತ್ತು ಅಡೋಬ್ ಪ್ರೀಮಿಯರ್ ಪ್ರೋನಲ್ಲಿ ವಿಡಿಯೊ ಎಡಿಟ್ ಮಾಡಿದೆ. ನನ್ನ ತಂಗಿಗೆ ಮೊದಲು ವಿಡಿಯೊ ತೋರಿಸಿದೆ ಮತ್ತು ಅದನ್ನು ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲು ಅವಳು ನನ್ನನ್ನು ಮನವೊಲಿಸಿದಳು. ಇದೊಂದು ಸಿಲ್ಲಿ ವಿಡಿಯೊ, ಇದಕ್ಕೆ ಈ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಕಮೆಂಟ್‌ಗಳು ಹರಿದುಬರುತ್ತಿದ್ದು, ಕೆಲವರು ಇವರ ತಂತ್ರಗಳನ್ನು ಕಲಿಯಲು ಬಯಸಿದರೆ, ಮತ್ತಷ್ಟು ಜನರು ವಿಡಿಯೊವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.