ADVERTISEMENT

ಫೋನಿ ಹಾನಿ: ಒಡಿಶಾಕ್ಕೆ ಬೆಸ್ಕಾಂ ತಂಡ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:30 IST
Last Updated 13 ಮೇ 2019, 20:30 IST

ಬೆಂಗಳೂರು: ಫೋನಿ ಚಂಡಮಾರುತದಿಂದ ಹಾನಿಗೆ ಒಳಗಾಗಿರುವ ಒಡಿಶಾದಲ್ಲಿನ ವಿದ್ಯುತ್‌ ಸರಬರಾಜು ಜಾಲವನ್ನು ಮರುಸ್ಥಾಪಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ(ಬೆಸ್ಕಾಂ) 317 ಸಿಬ್ಬಂದಿ ವಿಶೇಷ ರೈಲಿನಲ್ಲಿ ಸೋಮವಾರ ತೆರಳಿದರು.

ತಂಡದಲ್ಲಿ ನುರಿತ ಪವರ್‌ ಮ್ಯಾನ್‌, ಕಿರಿಯ ಎಂಜಿನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ಗಳು ಇದ್ದಾರೆ. ತಂಡದ ಸದಸ್ಯರು ಒಡಿಶಾ ಸರ್ಕಾರ ರೂಪಿಸಿರುವ ಕಾರ್ಯ ಯೋಜನೆಯಂತೆ 15 ದಿನಗಳು ಕಾರ್ಯನಿರ್ವಹಿಸಿ ಜಾಲವನ್ನು ಸರಿಪಡಿಸಲು ಶ್ರಮಿಸಲಿದ್ದಾರೆ.

ಒಡಿಶಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿ ಸಿಬ್ಬಂದಿ ಕಳುಹಿಸಿಕೊಡುವಂತೆ ಕೋರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.