ADVERTISEMENT

ಈ ತಿಂಗಳಾಂತ್ಯದಲ್ಲಿ ಕಾಶಿಯಾತ್ರೆಗೆ ಭಾರತ್‌ ಗೌರವ್‌ ರೈಲು: ಸಚಿವೆ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 13:32 IST
Last Updated 15 ಆಗಸ್ಟ್ 2022, 13:32 IST
ರೈಲು
ರೈಲು   

ಕೊಪ್ಪಳ: ‘ಕಾಶಿಯಾತ್ರೆಗೆ ತೆರಳುವ ರಾಜ್ಯದ ಯಾತ್ರಾರ್ಥಿಗಳಿಗೆ ಆಗಸ್ಟ್‌ ಕೊನೆಯ ವಾರದಲ್ಲಿ ಬೆಂಗಳೂರಿನಿಂದ ‘ಭಾರತ್‌ ಗೌರವ್‌’ ರೈಲು ಸಂಚಾರ ಆರಂಭಗೊಳ್ಳಲಿದೆ’ ಎಂದು ಮುಜುರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ ಹೇಳಿದರು.

‘ಯಾತ್ರೆಗೆ ತೆರಳುವ ರಾಜ್ಯದ 30 ಸಾವಿರ ಯಾತ್ರಾರ್ಥಿಗಳಿಗೆ ತಲಾ ₹5 ಸಾವಿರ ಸಬ್ಸಿಡಿ ನೀಡಲಾಗುವುದು. 7 ದಿನಗಳ ಪ್ರವಾಸದಲ್ಲಿ ಕಾಶಿ, ಆಯೋಧ್ಯ ಮತ್ತು ಪ್ರಯಾಗರಾಜ್‌ ದರ್ಶನ ಪಡೆಯಬಹುದು’ ಎಂದು ಹೇಳಿದರು.

‘ಆಗಸ್ಟ್‌ 25ರಂದು ಸಪ್ತಪದಿ ಸಾಮೂಹಿಕ ಸರಳ ವಿವಾಹ ನಡೆಯಲಿದೆ. ವಿವಾಹಾಕಾಂಕ್ಷಿಗಳು ಅಥವಾ ಅವರ ಪೋಷಕರಿಂದ ಎಷ್ಟೇ ಅರ್ಜಿಗಳು ಸಲ್ಲಿಕೆಯಾದರೂ ಅವುಗಳನ್ನು ಪರಿಗಣಿಸಲಾಗುವುದು. ಯಾವ ಅರ್ಜಿಗಳನ್ನೂ ವಾಪಸ್ ಕಳುಹಿಸುವಂತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.