ಬೆಂಗಳೂರು: 2020ನೇ ಸಾಲಿನ ಪ್ರಜಾವಾಣಿ ‘ಭೂಮಿಕಾ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದೆ.ಮಾಲತಿ ಹೆಗಡೆಯವರು ಬರೆದ ‘ಜೀವದಾಯಿನಿಯರ ಜಲಗಾಥೆ!’ ಮೊದಲ ಬಹುಮಾನ ಪಡೆದಿದೆ.
ನಳಿನಿ ಟಿ. ಭೀಮಪ್ಪ ಅವರು ಬರೆದ ‘ಯಾರಿಗ್ಹೇಳೋಣಾ ನನ್ನ ಪ್ರಾಬ್ಲೆಮ್ಮು?’ ಹಾಗೂನಿರ್ಮಲಾ ಶೆಟ್ಟರ ಅವರ ‘ಅಲಂಕಾರಕ್ಕೆ ಸೈ.. ಆಪದ್ಬಾಂಧವಳಿಗೆ ಜೈ!’ ಪ್ರಬಂಧಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದಿವೆ.ಕಲ್ಪನಾ ಪ್ರಭಾಕರ್ ಸೋಮನಳ್ಳಿಯವರ ‘ಎಮ್ಮಾಯಣ’ ಮತ್ತು ಲಲಿತಾ ಕೆ. ಹೊಸಪ್ಯಾಟಿಯವರ ‘ಏರಿದ ಬಸ್ಸಲಿ ಬೆರೆತಾಗ!’ ಪ್ರಬಂಧಗಳು ಮೆಚ್ಚುಗೆಗೆ ಪಾತ್ರವಾಗಿವೆ.
ಹಿರಿಯ ಕಥೆಗಾರ್ತಿ ವಸುಮತಿ ಉಡುಪ ಹಾಗೂ ಪ್ರಬಂಧ ಬರಹಗಾರಈರಪ್ಪ ಎಂ. ಕಂಬಳಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.