ಡಿ.ಕೆ ಶಿವಕುಮಾರ್
ಬೆಂಗಳೂರು: ಬಿಹಾರದಲ್ಲಿ ಉಚಿತವಾಗಿ 125 ಯೂನಿಟ್ ವಿದ್ಯುತ್ ನೀಡುವ ನಿತೀಶ್ ಕುಮಾರ್ ಅವರ ಘೋಷಣೆ ಕರ್ನಾಟಕ ಮಾದರಿಯಿಂದ ಪ್ರೇರೇಪಿತವಾಗಿದ್ದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಜನರ ಕಲ್ಯಾಣದ ಪರವಾಗಿ ನಿಂತಿದೆ ಎಂದರು.
‘ಸ್ವಾತಂತ್ರ್ಯ ಬಳಿಕ ಇಂದಿನವರೆಗೆ, ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವಾಗೆಲ್ಲಾ ಕಾಂಗ್ರೆಸ್ ಸರ್ಕಾರವಿತ್ತೋ ಆವಾಗೆಲ್ಲಾ ವಿವಿಧ ಯೋಜನೆಗಳನ್ನು ಜನರಿಗೆ ನೀಡಿದೆ’ ಎಂದು ಅವರು ನುಡಿದರು.
‘ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಕರ್ನಾಟಕ ಈ ಪ್ರವೃತ್ತಿಯನ್ನು ಆರಂಭಿಸಿತು. ಕಾಂಗ್ರೆಸ್ ಜನರ ಕಲ್ಯಾಣಕ್ಕೆ ಇದನ್ನು ಮಾಡಿತು. ಆದರೆ ಬಿಜೆಪಿಯವರು ಇನ್ನೊಮ್ಮೆ ಅಧಿಕಾರಕ್ಕೆ ಬರಲು ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ ಹಾಗೂ ದೇಶದ ಇತರ ಕಡೆಗಳಲ್ಲಿ ಇದನ್ನು ಬಳಸಿತು’ ಎಂದು ದೂರಿದರು.
ಕರ್ನಾಟಕಕ್ಕೆ ಕಾಂಗ್ರೆಸ್ ಏನೆಲ್ಲಾ ನೀಡಿದೆಯೋ, ಇಡೀ ದೇಶ ಅದನ್ನು ಅನುಸರಿಸುತ್ತಿದೆ. ಹೀಗಾಗಿ ದೇಶದಲ್ಲಿ ಕರ್ನಾಟಕ ಮಾದರಿ ಇದೆ ಎಂದರು.
ಬಿಹಾರ ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಬಿಹಾರ ಮುಖ್ಯಮಂತ್ರಿ 125 ಯೂನಿಟ್‌ಗಳ ಉಚಿತ ವಿದ್ಯುತ್ ಯೋಜನೆ ಘೋಷಣೆ ಮಾಡಿದ್ದಾರೆ. ಆಗಸ್ಟ್ 1ರಿಂದ ಇದು ಜಾರಿಗೆ ಬರಲಿದ್ದು, 1.67 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.