
ಬೀದರ್: ‘ಬಿಹಾರದಲ್ಲಿ 84 ಲಕ್ಷ ಮತಗಳ ಕಳ್ಳತನವಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರ ಮತಗಳನ್ನು ತೆಗೆದು, ಹೊಸದಾಗಿ 25 ಲಕ್ಷ ಮತದಾರರ ಹೆಸರು ಸೇರಿಸಿದ್ದಾರೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 100 ಸೀಟುಗಳಲ್ಲಿ ಸ್ಪರ್ಧಿಸಿದೆ. ಇದರಲ್ಲಿ 90ರಲ್ಲಿ ಗೆದ್ದಿದೆ. ಬಿಹಾರವೇನೂ ಅಮೆರಿಕನಾ? ಬೆಂಗಳೂರಿನಲ್ಲಿ ಟಾರ್ಚ್ ಹಾಕಿ ಹುಡುಕಿದರೆ ಮನೆ ಮನೆಯಲ್ಲಿ ಬಿಹಾರಿಗಳು ಸಿಗುತ್ತಾರೆ. ಬಿಜೆಪಿ ಬಿಹಾರದಲ್ಲಿ 90 ಸೀಟ್ ಗೆಲ್ಲಲು ಅವರೇನು ಸಾಧನೆ ಮಾಡಿದ್ದಾರೆ ಎಂದು ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡುತ್ತ ಪ್ರಶ್ನಿಸಿದರು.
ಚುನಾವಣಾ ಆಯೋಗವು ಎಸ್.ಐ.ಆರ್. ಹೆಸರಿನಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ. ಸುಪ್ರೀಂಕೋರ್ಟ್ ಹೇಳಿದರೂ ಪುನಃ ಸೇರಿಸಲಿಲ್ಲ. ಚುನಾವಣೆಗೆ ಒಂದು ತಿಂಗಳು ಇರುವಾಗ ಹೆಣ್ಣು ಮಕ್ಕಳ ಖಾತೆಗೆ ₹10 ಸಾವಿರ ಜಮೆ ಮಾಡಿದ್ದಾರೆ. ಬಿಜೆಪಿ ಕೇಂದ್ರದಲ್ಲಿ 11 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಹೀಗೆ ಹಣ ಕೊಡುವ ಉದ್ದೇಶವಾದರೂ ಏನು ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.