ADVERTISEMENT

ರಸ್ತೆ ಪಕ್ಕ ಕಾಡುಕೋಣ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:50 IST
Last Updated 8 ಜುಲೈ 2019, 19:50 IST
ನಾಗರಗಾಳಿ ಅರಣ್ಯದ ರಸ್ತೆಯಲ್ಲಿ ಸೋಮವಾರ ಕಾಣಿಸಿಕೊಂಡ ಕಾಡುಕೋಣ
ನಾಗರಗಾಳಿ ಅರಣ್ಯದ ರಸ್ತೆಯಲ್ಲಿ ಸೋಮವಾರ ಕಾಣಿಸಿಕೊಂಡ ಕಾಡುಕೋಣ   

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಕಟಕೋಳ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸೋಮವಾರ ಕಾಡುಕೋಣ ಕಾಣಿಸಿಕೊಂಡಿತು.

ನಾಗರಗಾಳಿ– ಬಸ್ತವಾಡ ಗ್ರಾಮದ ನಡುವಿನ ಅರಣ್ಯದಲ್ಲಿರುವ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಕಾಡುಕೋಣವನ್ನು ಗಮನಿಸಿದ ಬೈಕ್ ಸವಾರರು ವಿಡಿಯೊ ಮಾಡಿಕೊಂಡರು. ಕೆಲವರು ಅದರ ಚಿತ್ರವನ್ನು ತೆಗೆದರು.

ವಾಹನ ಸವಾರರನ್ನು ಕಂಡರೂ ಕಾಡುಕೋಣ ಸ್ಥಳದಿಂದ ಕಾಲ್ಕಿತ್ತದೇ ಕೆಲಕಾಲ ಆತಂಕ ಮೂಡಿಸಿತು, ಬಳಿಕ ಕಾಡುಕೋಣ ಅರಣ್ಯದಲ್ಲಿ ಮರೆಯಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.