ADVERTISEMENT

ಬಿ.ವೈ. ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ: 'ಎಳೆ ಹುಡುಗನಿಗೆ' ಪಟ್ಟ– ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2023, 13:25 IST
Last Updated 11 ನವೆಂಬರ್ 2023, 13:25 IST
<div class="paragraphs"><p>ಕಾಂಗ್ರೆಸ್‌ (ಕಡತ ಚಿತ್ರ)</p></div>

ಕಾಂಗ್ರೆಸ್‌ (ಕಡತ ಚಿತ್ರ)

   

ಬೆಂಗಳೂರು: ಬಿ.ಎಸ್‌ ಯಡಿಯೂರಪ್ಪನವರ ಮಗ ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡಿರುವುದನ್ನು ಟೀಕಿಸಿರುವ ಕಾಂಗ್ರೆಸ್‌, ಎಳೆ ಹುಡುಗನಿಗೆ ಪಟ್ಟ ಕಟ್ಟುವ ಮೂಲಕ ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಅನರ್ಹರು ಎಂಬ ಸಂದೇಶವನ್ನು ಬಿಜೆಪಿ ನೀಡಿದೆಯೇ? ಎಂದು ಕೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಾಂಗ್ರೆಸ್‌, ವಿಜಯೇಂದ್ರಗೆ ಪಟ್ಟ ಕಟ್ಟುವ ಮೂಲಕ ಬಿಜೆಪಿ ನಾಯಕರಿಲ್ಲದ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಹಲವರಿದ್ದರೂ 'ಎಳೆ ಹುಡುಗನಿಗೆ' ಪಟ್ಟ ಕಟ್ಟುವ ಮೂಲಕ ಉಳಿದವರೆಲ್ಲ ಅನರ್ಹರು ಎಂಬ ಸಂದೇಶ ನೀಡಿದ್ದೇ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿದಿದ್ದೇ ? ಎಂದು ಪ್ರಶ್ನಿಸಿದೆ.

ADVERTISEMENT

ಬಿ.ವೈ. ವಿಜಯೇಂದ್ರ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ!.. ಇದು ಸಿ.ಟಿ ರವಿ, ಬಸವನಗೌಡ ಪಾಟೀಲ ಯತ್ನಾಳ ಹಾಗೂ ಬಿ.ಎಲ್‌ ಸಂತೋಷ್‌ ಅವರುಗಳೇ ಸಮಾಧಾನ ಮಾಡಿಕೊಳ್ಳುತ್ತಿರುವುದೋ ಅಥವಾ ನೈಜತೆ ಇದೆಯೋ ಎಂದು ವ್ಯಂಗ್ಯವಾಡಿದೆ.

ಯತ್ನಾಳ ಅವರೇ ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ, ತಲೆಬಾಗಿಸಿ ನಿಲ್ಲುವಿರಾ? ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ?. ಈಗ ಯಡಿಯೂರಪ್ಪನವರ ಕಿಚನ್ ಕ್ಯಾಬಿನೆಟ್‌ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ. ಸಿ.ಟಿ ರವಿ ಅವರೇ, ಕಿಚನ್ ಕ್ಯಾಬಿನೆಟ್‌ಗೆ ತಾವು ಹೋಗುವಿರಾ ಅಥವಾ ತಾವೂ ರಾಜಕೀಯ ನಿವೃತ್ತಿ ಪಡೆಯುವಿರಾ? ಎಂದು ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.