ADVERTISEMENT

ಅವಕಾಶ ನೀಡಿದರೂ ಸುಧಾರಿಸದ ಯತ್ನಾಳ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 14:01 IST
Last Updated 27 ಮಾರ್ಚ್ 2025, 14:01 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ನವದೆಹಲಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒಂದು ವರ್ಷದಿಂದ ಸತತವಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ತಿದ್ದಿಕೊಳ್ಳಲು ಹಲವು ಅವಕಾಶ ನೀಡಿದರೂ ಸುಧಾರಿಸಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು. 

ಗುರುವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಅವರು ಪಕ್ಷದ ಚೌಕಟ್ಟಿನಲ್ಲೇ ಮಾತನಾಡಬೇಕಿತ್ತು. ಬಹಳ ದಿನಗಳ ಹಿಂದೆಯೇ ಉಚ್ಚಾಟನೆ ಮಾಡುತ್ತಾರೆ ಎಂಬ ಮಾಹಿತಿ ಇತ್ತು. ಈ ಹಿಂದೆ ಬಹಳಷ್ಟು ಹಿರಿಯ ನಾಯಕರನ್ನು ಉಚ್ಚಾಟಿಸಿದ ಉದಾಹರಣೆಗಳಿವೆ. ಈಚಿನ ಬೆಳವಣಿಗೆಗಳಿಂದ ಕಾರ್ಯಕರ್ತರು ಬೇಸರಗೊಂಡಿದ್ದರು. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಿದೆ’ ಎಂದರು. 

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಗೌರವಾನ್ವಿತ ಯತ್ನಾಳ ಅವರನ್ನು ಪಕ್ಷ ಆರು ವರ್ಷಗಳ ಅವಧಿಗೆ ಉಚ್ಚಾಟಿಸಿದೆ. ಪಕ್ಷದ ಆಂತರಿಕ ವಿಷಯ ನಾಲ್ಕು ಗೋಡೆಗಳ ನಡುವೆ ಚರ್ಚೆಯಾಗಬೇಕಿತ್ತು. ಈಗಿನ ಬೆಳವಣಿಗೆ ನಮ್ಮೆಲ್ಲರಿಗೂ ‍ಪಾಠವಾಗಬೇಕು’ ಎಂದರು. 

ADVERTISEMENT

‘ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೂಲಕ ಪಕ್ಷ ಸಂಘಟನೆ ಆಗಲಿದೆ. ಅವರಿಗೆ ಹಲವು ಸವಾಲುಗಳಿವೆ. ಈಗಿನ ಬೆಳವಣಿಗೆ ಬಗ್ಗೆ ಯಾವ ಕಾರ್ಯಕರ್ತರೂ ಸಂಭ್ರಮ ಪಡುವ ಹಾಗಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.