ADVERTISEMENT

ಸಿದ್ದರಾಮಯ್ಯರಂಥವರು ಇರುವುದೇ ದುರಂತ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 13:21 IST
Last Updated 13 ಜುಲೈ 2022, 13:21 IST
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಬುಧವಾರ ಮಂಡ್ಯದಲ್ಲಿ ಮಾತನಾಡಿದರು – ಪ್ರಜಾವಾಣಿ ಚಿತ್ರ
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಬುಧವಾರ ಮಂಡ್ಯದಲ್ಲಿ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಮಂಡ್ಯ: ‘75 ವರ್ಷ ವಯಸ್ಸಾಗುತ್ತಿದ್ದರೂ ಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಂಥವರು ಇರುವುದೇ ದುರಂತ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮೋತ್ಸವ ಎಂದರೆ ಮನೆಗೆ ಹೋಗು ಎಂದರ್ಥವಾಗಿದೆ. 75 ವರ್ಷ ಆಗಿದೆ, ಸಾಕಪ್ಪ ಸಿದ್ದರಾಮಯ್ಯ, ನೀನು ಮಾಡಿದ್ದೇ ಸಾಕು, ಈ ಕಾಲಕ್ಕೆ ನೀವು ಅಪ್ರಸ್ತುತ, ಮನೆಗೆ ಹೋಗಿ ಎಂದು ಹೇಳಿ ಕಳುಹಿಸುವುದೇ ಸಿದ್ದರಾಮೋತ್ಸವವಾಗಿದೆ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ರಾಜ್ಯಕ್ಕೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಅತಿ ಆಸೆ, ಸ್ವಾರ್ಥವೇ ಅವರಲ್ಲಿ ತುಂಬಿ ತುಳುಕುತ್ತಿದೆ. 75 ವರ್ಷ ವಯಸ್ಸಿನಲ್ಲಿ ಸಮಾಜಕ್ಕಾಗಿ ಬದುಕುವುದನ್ನು ಬಿಟ್ಟು ಅವರಿಗಾಗಿ ಮಾತ್ರ ಬದುಕುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.