ಮೈಸೂರು: ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಮಂಗಳವಾರ ನಸುಕಿನಲ್ಲಿ ಲಘು ಹೃದಯಾಘಾತವಾಗಿದ್ದು ಮೈಸೂರಿನ ಅಪೊಲೊ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎದೆನೋವು ಕಾಣಿಸಿಕೊಂಡ ಕಾರಣ ರಾಮದಾಸ್ ಅಪೊಲೊ ಆಸ್ಪತ್ರೆಗೆ ಧಾವಿಸಿದ್ದಾರೆ. ಅವರನ್ನು ಕೊರೊನರಿ ಆಂಜಿಯೊಗ್ರಾಂ, ಕೊರೊನರಿ ಆಂಜಿಯೊಪ್ಲಾಸ್ಟಿ ಪ್ರಕ್ರಿಯೆಗೆ ಒಳಪಡಿಸಿ, ಸ್ಟಂಟ್ ಅಳವಡಿಸಲಾಗಿದೆ.
ರಾಮದಾಸ್ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.