ADVERTISEMENT

ಸಂಘಪ್ಪ vs ಗಾಂಧಿ ಜಾಹೀರಾತು: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 14:12 IST
Last Updated 29 ಜನವರಿ 2026, 14:12 IST
   

ಬೆಂಗಳೂರು: ವಿಬಿ–ಜಿ ರಾಮ್‌ ಜಿ ವಿರೋಧಿಸಿ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತು ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ರಾಜ್ಯ ಕಾಂಗ್ರೆಸ್‌ ಸರ್ಕಾರ, ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಗಾಳಿಗೆ ತೂರಿ, ಆಶಯಗಳಿಗೆ ಸಮಾಧಿ ಕಟ್ಟಿ, ಅದರ ಮೇಲೆ ಅಧಿಕಾರದಿಂದ ಮೆರೆಯುತ್ತಿದೆ ಎಂದು ಕಿಡಿಕಾರಿದೆ.

ಕಾನೂನುಬಾಹಿರ:
ರಾಜ್ಯದ ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಸರ್ಕಾರ ಜಾಹೀರಾತು ನೀಡಿರುವುದು ಕಾನೂನುಬಾಹಿರ. ಸರ್ಕಾರಿ ಜಾಹೀರಾತಿನಲ್ಲಿ ಗಾಂಧೀಜಿ ಅವರು ಹೇಳದ ಪದಗಳನ್ನು ಉಲ್ಲೇಖಿಸುವ ಮೂಲಕ ಸಂವಿಧಾನವನ್ನು ಮತ್ತು ಗಾಂಧೀಜಿಯವರನ್ನು ಅವಮಾನಿಸಲಾಗಿದೆ.
ಆರ್‌. ಅಶೋಕ – ವಿಧಾನಸಭೆ ಪ್ರತಿಪಕ್ಷ ನಾಯಕ

ತಪ್ಪು ಜಾಹೀರಾತು ನೀಡಿ ದಾರಿ ತಪ್ಪಿಸುತ್ತಿದೆ

ರಾಜ್ಯ ಸರ್ಕಾರ ಇಲಾಖೆಯ ಹಣದಿಂದ ತಪ್ಪು ಜಾಹೀರಾತು ನೀಡಿ ದಾರಿ ತಪ್ಪಿಸುತ್ತಿದೆ. ರಾಜ್ಯ ಸರ್ಕಾರದ ಕಾನೂನುಗಳನ್ನು ಹೇಗೆ ಗ್ರಾಮ ಪಂಚಾಯತಿ ಅಳವಡಿಸಿಕೊಳ್ಳುತ್ತದೆಯೂ, ಅದೇ ರೀತಿ ಕೇಂದ್ರ ಸರ್ಕಾರದ ಕಾನೂನನ್ನು ಒಪ್ಪಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಯೋಜನೆಯ ಕುರಿತು ನಮ್ಮ ವಿರೋಧವಿದೆ ಎಂದು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ, ನಗರಸಭೆಗಳು ಜಾಹೀರಾತು ನೀಡಿದರೆ ಪಿಡಿಒ ಮತ್ತು ಆಯುಕ್ತರು ಒಪ್ಪುವರೇ? ಎಂದು ಶಾಸಕ ಸುನಿಲ್ ಕುಮಾರ್‌ ಪ್ರಶ್ನಿಸಿದ್ದಾರೆ.

ADVERTISEMENT
ಸುಳ್ಳು ಮಾಹಿತಿಗಳುಳ್ಳ ತಪ್ಪು ಜಾಹೀರಾತು
ರಾಜ್ಯ ಸರ್ಕಾರ ಸುಳ್ಳು ಮಾಹಿತಿಗಳುಳ್ಳ ತಪ್ಪು ಜಾಹೀರಾತು ನೀಡಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ಹೇಳುವ ಕಾಂಗ್ರೆಸ್‌ ಸರ್ಕಾರ 500 ಮೀಟರ್‌ಗೊಂದರಂತೆ ಮದ್ಯದಂಗಡಿಗಳನ್ನು ತೆರೆಯುತ್ತಿದೆ. ಜಾಹೀರಾತಿನ ಹಿಂದೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ದುರುದ್ದೇಶ ಹೊಂದಿದೆ.
ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.