ADVERTISEMENT

ದಾಳಿಯ ಯತ್ನವನ್ನು ಧೈರ್ಯದಿಂದ ಎದುರಿಸಿದೆ: ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 20:20 IST
Last Updated 9 ಫೆಬ್ರುವರಿ 2022, 20:20 IST
ಬೀಬಿ ಮುಸ್ಕಾನ್ ಖಾನ್
ಬೀಬಿ ಮುಸ್ಕಾನ್ ಖಾನ್   

ಮಂಡ್ಯ: ‘ಕೇಸರಿ ಶಾಲು ಧರಿಸಿದ್ದ ನೂರಾರು ವಿದ್ಯಾರ್ಥಿಗಳು ನನ್ನ ಮೇಲೆ ದಾಳಿಗೆ ಯತ್ನಿಸಿದರು. ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಪರಿಸ್ಥಿತಿಯನ್ನು ಧೈರ್ಯ ದಿಂದ ಎದುರಿಸಿದೆ’ ಎಂದು ನಗರದ ಪಿಇಎಸ್ ಪದವಿ ಕಾಲೇಜಿನ 2ನೇ ಬಿ.ಕಾಂ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಬುಧವಾರ ಹೇಳಿದರು.

ಮಂಗಳವಾರ ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಕೂಗುತ್ತಿದ್ದ ವಿದ್ಯಾರ್ಥಿಗಳ ಎದುರು ಅವರು ಧೈರ್ಯ ಪ್ರದರ್ಶಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿತ್ತು.

‘ನನಗಿಂತಲೂ ಮುಂಚೆಯೇ ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ನಾಲ್ಕೈದು ವಿದ್ಯಾರ್ಥಿನಿ ಯರ ಮೇಲೂ ಕೇಸರಿ ಶಾಲು ಧರಿಸಿದ್ದವರು ದಾಳಿಗೆ ಮುಂದಾಗಿದ್ದರು.

ADVERTISEMENT

ಅವರು ಅಳುತ್ತಾ ತರಗತಿಗೆ ತೆರಳಿದ್ದರು. ಆದರೆ, ನಾನು ಒಂಟಿಯಾಗಿ ಪ್ರತಿರೋಧಿಸಿದೆ. ತಕ್ಷಣ ನನ್ನ ಬಾಯಿಯಿಂದ ದೇವರ ಶಬ್ದಗಳು ಬಂದವು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.