
ಬೆಳಗಾವಿ ಅಧಿವೇಶನ (ಸಂಗ್ರಹ ಚಿತ್ರ)
ಬೌದ್ಧ ಬಿಕ್ಕುಗಳಿಗೂ ಸಂಭಾವನೆ
ಮುಜರಾಯಿ ದೇವಸ್ಥಾನಗಳ ಅರ್ಚಕರ ರೀತಿ ಬೌದ್ಧ ಬಿಕ್ಕುಗಳಿಗೂ ಪ್ರತಿ ತಿಂಗಳು₹6,000 ಗೌರವಧನ ನೀಡಲಾಗುವುದು. ಈಗಾಗಲೇ ಪ್ರಸ್ತಾವನೆ ಪರಿಶೀಲನೆಯ ಹಂತದಲ್ಲಿದ್ದು, ಆದೇಶವನ್ನು ಶೀಘ್ರ ಹೊರಡಿಸಲಾಗುವುದು. ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಅರ್ಚಕರು, ಮಸೀದಿಗಳ ಪೇಶ್ ಇಮಾಮ್‌ಗಳಿಗೆ ಈಗಾಗಲೇ ₹6,000ನೀಡಲಾಗುತ್ತಿದೆ
ಅಲ್ಪಸಂಖ್ಯಾತಕಲ್ಯಾಣ ಸಚಿವರ ಪರವಾಗಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ
ಪ್ರಶ್ನೆ: ಕಾಂಗ್ರೆಸ್‌ನ ಕೆ.ಶಿವಕುಮಾರ್
ಕಾವೇರಿ–2 ತಂತ್ರಾಂಶದ ಸಮಸ್ಯೆ ಇಲ್ಲ
ವಿಭಾಗ ಪತ್ರ, ದಾನಪತ್ರಗಳ ನೋಂದಣಿ ಸಮಸ್ಯೆಗೆ ಕಾವೇರಿ–2 ತಂತ್ರಾಂಶ ಕಾರಣವಲ್ಲ. ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ 36,724 ವಿಭಾಗ ಪತ್ರಗಳು ಹಾಗೂ 85,698 ದಾನ ಪತ್ರಗಳು ನೋಂದಣಿಯಾಗಿವೆ. ವಿಭಾಗ ಮಾಡಿಕೊಡಬೇಕಿರುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಈ ಕುರಿತು ಗ್ರಾಮೀಣಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ ಸಚಿವರ ಜತೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು
- ಕೃಷ್ಣಬೈರೇಗೌಡ, ಕಂದಾಯ ಸಚಿವ. ಪ್ರಶ್ನೆ: ಡಿ.ಎಸ್.ಅರುಣ್, ಬಿಜೆಪಿ
ಎ.ಸಿ ಕೋರ್ಟ್ ಪ್ರಕರಣ: ಮೂರು ತಿಂಗಳೊಳಗೆ ಇತ್ಯರ್ಥ
ಎಲ್ಲ 54 ಉಪ ವಿಭಾಗಾಧಿಕಾರಿಗಳ (ಎ.ಸಿ) ಕೋರ್ಟ್‌ನಲ್ಲಿರುವ ಬಾಕಿ ಪ್ರಕರಣಗಳನ್ನು ಮೂರು ತಿಂಗಳ ಒಳಗೆ ಇತ್ಯರ್ಥ ಮಾಡಲಾಗುವುದು. ಎರಡೂವರೆ ವರ್ಷಗಳ ಹಿಂದೆ 62,857 ಪ್ರಕರಣಗಳು ಬಾಕಿ ಇದ್ದವು. ವಿಶೇಷ ಉಪವಿಭಾಗಾಧಿಕಾರಿ ಕೋರ್ಟ್‌ಗಳನ್ನು ಸ್ಥಾಪಿಸಿ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗ 14,324 ಪ್ರಕರಣಗಳು ಬಾಕಿ ಇದ್ದು, ಎಲ್ಲ ಪ್ರಕರಣಗಳನ್ನೂ ಇತ್ಯರ್ಥ ಮಾಡಲಾಗುವುದು
- ಕೃಷ್ಣಬೈರೇಗೌಡ, ಕಂದಾಯ ಸಚಿವ. ಪ್ರಶ್ನೆ: ರಾಮೋಜಿಗೌಡ, ಕಾಂಗ್ರೆಸ್
ಭದ್ರಾ, ಯಗಚಿ: ಭೂಮಿ ಹಂಚಿಕೆ ಪರಿಶೀಲನೆ
ಚಿಕ್ಕಮಗಳೂರು ಜಿಲ್ಲೆ ಭದ್ರಾ ವನ್ಯಜೀವಿ ಸಂರಕ್ಷಣಾ ಯೋಜನೆ, ಹಾಸನ ಜಿಲ್ಲೆ ಯಗಜಿ ಜಲಾಶಯ ಯೋಜನೆಗಳ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡುವಲ್ಲಿ ಕೆಲ ಸಮಸ್ಯೆಗಳು ಆಗಿವೆ. ಹಿಂದಿನ ಸರ್ಕಾರಗಳು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಡಿಮೆ ಭೂಮಿ ಕಳೆದುಕೊಂಡವರಿಗೆ ಹೆಚ್ಚು ಜಮೀನು ಸಕ್ಕಿದೆ. ಅಂದು ಜನಿಸದೇ ಇದ್ದವರ ಹೆಸರಿಗೂ ಪರ್ಯಾಯ ಜಮೀನು ಪಡೆದಿದ್ದಾರೆ. ಗೋಮಾಳ ಭೂಮಿಯೂ ಹಂಚಿಕೆಯಾಗಿದೆ. ಈ ಎಲ್ಲ ವಿಷಯಗಳ ಕುರಿತು ಸೂಕ್ತ ಮಾಹಿತಿ ಪಡೆದು, ಕ್ರಮ ಕೈಗೊಳ್ಳಲಾಗುವುದು
- ಕೃಷ್ಣಬೈರೇಗೌಡ, ಕಂದಾಯ ಸಚಿವ. ಪ್ರಶ್ನೆ: ಎಸ್.ಎಲ್.ಭೋಜೇಗೌಡ, ಜೆಡಿಎಸ್
ಅವಧಿ ಮುಗಿದ 3,791 ಬಸ್‌ಗಳು ನಿಷ್ಕ್ರಿಯ
ಅವಧಿ ಪೂರೈಸಿ, ನಿರುಪಯುಕ್ತವಾದ ನಾಲ್ಕು ಸಾರಿಗೆ ನಿಮಗಳ 3,212 ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಬಾಕಿ ಇರುವ 579 ಬಸ್‌ಗಳನ್ನು ಶೀಘ್ರ ನಿಷ್ಕ್ರಿಯಗೊಳಿಸಲಾಗುವುದು. ಮೂರು ವರ್ಷಗಳಲ್ಲಿ 5,851 ಹೊಸ ಬಸ್‌ಗಳನ್ನು ಖರೀದಿಸಲಾಗಿದ್ದು, ಹೊಸದಾಗಿ 2,806 ಬಸ್‌ಗಳ ಖರೀದಿಗೆ ಅನುಮತಿ ನೀಡಲಾಗಿದೆ
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ. ಪ್ರಶ್ನೆ:ಗೋವಿಂದರಾಜು, ಜೆಡಿಎಸ್
****
ಕಾವೇರಿ–2 ತಂತ್ರಾಂಶದಲ್ಲಿ ಸಮಸ್ಯೆ ಇಲ್ಲ
ವಿಭಾಗ ಪತ್ರ, ದಾನಪತ್ರಗಳ ನೋಂದಣಿ ಸಮಸ್ಯೆಗೆ ಕಾವೇರಿ–2 ತಂತ್ರಾಂಶ ಕಾರಣವಲ್ಲ. ಕಳೆದ ಮೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ 36,724 ವಿಭಾಗ ಪತ್ರಗಳು ಹಾಗೂ 85,698 ದಾನ ಪತ್ರಗಳು ನೋಂದಣಿಯಾಗಿವೆ. ವಿಭಾಗ ಮಾಡಿಕೊಡಬೇಕಿರುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಈ ಕುರಿತು ಗ್ರಾಮೀಣಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ ಸಚಿವರ ಜತೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು
ಕೃಷ್ಣಬೈರೇಗೌಡ, ಕಂದಾಯ ಸಚಿವ , ಪ್ರಶ್ನೆ: ಡಿ.ಎಸ್.ಅರುಣ್, ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.