ADVERTISEMENT

KSRTC, BMTC ಸೇರಿದಂತೆ ವಿವಿಧ ಸಾರಿಗೆ ನಿಗಮಗಳ ಬಸ್ ಪಾಸ್ ದರವೂ ಏರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2025, 23:31 IST
Last Updated 9 ಜನವರಿ 2025, 23:31 IST
   

ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆಯಾಗಿರುವುದರಿಂದ ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳ ದೈನಿಕ, ಸಾಪ್ತಾಹಿಕ, ತಿಂಗಳ ಪಾಸ್ ಗಳ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ದರ ಜನವರಿ 9ರಿಂದ ಜಾರಿಯಾಗಿದೆ. 

ಈ ಬಗ್ಗೆ ಬುಧವಾರ ದರಪಟ್ಟಿ ಬಿಡುಗಡೆ ಮಾಡಲಾಗಿತ್ತು. 

ಬಿಎಂಟಿಸಿ ವೋಲ್ವೋ, ವಾಯು ವಜ್ರ ಬಸ್‌ಗಳ ದೈನಿಕ, ತಿಂಗಳ ಪಾಸ್ ದರದಲ್ಲಿ ಟೋಲ್ ಶುಲ್ಕ ಹಾಗೂ ಜಿಎಸ್ ಟಿ ಶುಲ್ಕವನ್ನು ಸೇರ್ಪಡೆ ಮಾಡಿದೆ. ಇದರಿಂದ ಕನಿಷ್ಠ ₹10ರಿಂದ ₹150ರವರೆಗೆ ದರ ಏರಿಕೆಯಾಗಿದೆ. ಪರಿಷ್ಕೃತ ದರದ ಪಾಸ್‌ಗಳು ವಿತರಿಸುವವರೆಗೂ ಪ್ರಸ್ತುತ ಇರುವ ಪಾಸ್‌ಗಳ ಮೇಲೆ ಪರಿಷ್ಕೃತ ದರದ ಮೊಹರು ಹಾಕಿ ವಿತರಿಸಬೇಕು ಒಪ್ಪಂದದ ಮೇರೆಗೆ ಪಡೆಯುವ ವಾಹನದ ದರವೂ ಹೆಚ್ಚಳವಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ತಿಳಿಸಿದ್ದಾರೆ.

ADVERTISEMENT

ಕೆಎಸ್ಆರ್ ಟಿಸಿ ಸೇರಿ ಇತರ ಮೂರು ಸಾರಿಗೆ ನಿಗಮಗಳ ವೇಗದೂತ ಮತ್ತು ತಡೆರಹಿತ ಬಸ್ ಗಳ ಮಾಸಿಕ ಪಾಸ್ ದರ ₹70ರಿಂದ ₹420ರವರೆಗೂ ಹೆಚ್ಚಳ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.