ADVERTISEMENT

ಅಜಯ್ ಮಾಕನ್‌ಗೆ ₹31 ಲಕ್ಷ ಮೌಲ್ಯದ ಕಾರು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:44 IST
Last Updated 3 ಫೆಬ್ರುವರಿ 2025, 16:44 IST
<div class="paragraphs"><p>ಅಜಯ್ ಮಾಕನ್‌</p></div>

ಅಜಯ್ ಮಾಕನ್‌

   

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ಕಳೆದ ವರ್ಷ ಫೆಬ್ರುವರಿಯಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಅಜಯ್ ಮಾಕನ್‌ ಅವರಿಗಾಗಿ ₹ 31 ಲಕ್ಷ ವೆಚ್ಚದಲ್ಲಿ ಇನ್ನೊವಾ ಹೈಬ್ರಿಡ್‌– ಹೈಕ್ರಾಸ್‌ ವಾಹನ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬಿಡದಿಯಲ್ಲಿರುವ ಟೊಯೊಟೊ ಕಿರ್ಲೋಸ್ಕರ್‌ ಪ್ರೈವೇಟ್‌ ಕಂಪನಿಯಿಂದ ಈ ವಾಹನ ಖರೀದಿಸಲು ಕೆಟಿಪಿಪಿ ಕಾಯ್ದೆಯಡಿ ವಿನಾಯಿತಿ ಕಲ್ಪಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ.

ADVERTISEMENT

ಅಜಯ್ ಮಾಕನ್‌ ಅವರು ಎಐಸಿಸಿ ಖಜಾಂಚಿ ಕೂಡಾ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.