ಬಳ್ಳಾರಿ:ಕೆಎಸ್ಆರ್ಟಿಸಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 11 ಲಕ್ಷ ನಗದನ್ನು ಶುಕ್ರವಾರ ರಾತ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಳ್ಳಿಯ ಜಿಟಿಟಿಸಿ ಬಳಿಯ ಚೆಕ್‌ಪೋಸ್ಟ್‌ನಲ್ಲಿಹಣ ಪತ್ತೆಯಾಗಿದೆ.
ಕೆಎ-17,ಎಫ್-1673 ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ದಾವಣಗೆರೆಯಿಂದ ಸೋಲಾಪುರಕ್ಕೆ ತೆರಳುತ್ತಿತ್ತು.
ವಶಪಡಿಸಿಕೊಂಡಿರುವ ಹಣವನ್ನು ಸ್ಥಿರ ಕಣ್ಗಾವಲು ಪಡೆ ಅಧಿಕಾರಿಗಳು ಪರಿಶೀಲಿಸಿ ಹಗರಿಬೊಮ್ಮನಹಳ್ಳಿ ಖಜಾನೆಯಲ್ಲಿಟ್ಟಿದ್ದಾರೆ.
ಈ ಹಣಗಂಗಾವತಿಯಕುವೆಂಪು ಬಡಾವಣೆಯನಿವಾಸಿಜೂಟುರು ಹನುಮೇಶಎಂಬುವವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.