ವೀರಭದ್ರಪ್ಪ
ಹೊಸಪೇಟೆ (ವಿಜಯನಗರ): ರಾಜ್ಯದ ಎಲ್ಲೆಡೆಯಂತೆ ಜಿಲ್ಲೆಯಲ್ಲೂ ಸಾಮಾಜಿಕ, ಆರ್ಥಿಕ ಸಮೀಕ್ಷೆ ಸೋಮವಾರ ಆರಂಭಗೊಂಡಿದ್ದು, ನಾನು ನಾಸ್ತಿಕ ಎಂದು ಬರೆಸುವೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ದೇವರು- ದಿಂಡಿರು, ಸ್ವರ್ಗ- ನರಕ- ಆ ಲೋಕ, ಈ ಲೋಕ, ಆ ಜನ್ಮ, ಈ ಜನ್ಮ, ಈ ವೈಗೈರೆಗಳಲ್ಲಿ ನಂಬಿಕೆ ಇರದವನು ನಾನು ಎಂದು ಹೇಳಿದ್ದಾರೆ.
ಕುಂ.ವೀ ಅವರು ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.