
ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನಸಭೆಯಲ್ಲಿ ಬಿಜೆಪಿಯ ಸಿಮೆಂಟ್ ಮಂಜು ಅವರ ಹೆಸರಿನಲ್ಲಿ ನಕಲಿ ಗಮನ ಸೆಳೆಯುವ ಸೂಚನೆ ನೀಡಿರುವುದು ಅಚ್ಚರಿಗೆ ಕಾರಣವಾಯಿತು.
ಗಮನ ಸೆಳೆಯುವ ಸೂಚನೆಯಡಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಸಿಮೆಂಟ್ ಮಂಜು ಹೆಸರು ಕೂಗಿದರು. ‘ಸಭಾಧ್ಯಕ್ಷರೇ ಅದು ನನ್ನದಲ್ಲ. ನಾನು ಗಮನ ಸೆಳೆಯುವ ಸೂಚನೆ ಕೊಟ್ಟಿಲ್ಲ. ಯಾರೋ ನನ್ನ ಸಹಿ ಮಾಡಿ ಕೊಟ್ಟಿದ್ದಾರೆ’ ಎಂದು ಗಮನಕ್ಕೆ ತಂದರು.
‘ಇದು ಹೇಗೆ ಹೀಗಾಯಿತು’ ಎಂದು ಸಭಾಧ್ಯಕ್ಷರು ಕೇಳಿದರು. ‘ನನಗೂ ಗೊತ್ತಿಲ್ಲ. ಯಾರೋ ನನ್ನ ಸಹಿ ಮಾಡಿ ಕೊಟ್ಟಿದ್ದಾರೆ’ ಎಂದು ಸಿಮೆಂಟ್ ಮಂಜು ಹೇಳಿದರು.
ಸದನಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಅದು ಹೀಗಾಗಲು ಹೇಗೆ ಸಾಧ್ಯ? ಇದು ಸರಿಯಲ್ಲ. ಹೀಗೆ ಮಾಡಿರುವುದು ತಪ್ಪು’ ಎಂದರು. ಸಭಾಧ್ಯಕ್ಷ ಯು.ಟಿ .ಖಾದರ್, ‘ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಪ್ರಶ್ನೆಗಳಿದ್ದರೇ ನೀವೆ ಬಂದು ಕೊಡಬೇಕು’ ಎಂದು ಸದಸ್ಯರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.