ADVERTISEMENT

ಸೋನಿಯಾ, ರಾಹುಲ್ ಗಾಂಧಿಗೆ ನೀಡಿದ್ದ ಎಸ್‌‌ಪಿಜಿ ಭದ್ರತೆ ವಾಪಸ್: ಸಿದ್ದರಾಮಯ್ಯ ಗರಂ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 15:49 IST
Last Updated 8 ನವೆಂಬರ್ 2019, 15:49 IST
   

ಮೈಸೂರು: ಕಾಂಗ್ರೆಸ್ ವರಿಷ್ಠರಾದ ಸೋನಿಯಾ, ರಾಹುಲ್, ಪ್ರಿಯಾಂಕ ಗಾಂಧಿ ಸೇರಿದಂತೆ ಇನ್ನಿತರರಿಗೆ ಒದಗಿಸಿದ್ದ ಎಸ್ ಪಿ ಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿರುವುದಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿದ್ದರಾಮಯ್ಯ,ಕೇಂದ್ರ ಸರ್ಕಾರ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ನೀಡಿದ ಎಸ್‌ಪಿಜಿ ಸೆಕ್ಯುರಿಟಿ ತೆಗೆದಿದೆ.ಯಾರಿಗೆ ಜೀವಬೆದರಿಕೆ ಇದೆ ಅಂತಹವರಿಗೆ ಭದ್ರತೆ ಕೊಟ್ಟಿದ್ದಾರೆ.ಅದನ್ನು ಯಾವುದೇ ಸಕಾರಣಗಳಿಲ್ಲದೆ ತೆಗೆದುಹಾಕಿದೆ.ಇಂದಿರಾಗಾಂಧಿ ಅವರನ್ನು ಸೆಕ್ಯುರಿಟಿಗಳೇ ಹತ್ಯೆ ಮಾಡಿರೋದು ಗೊತ್ತಿದೆ.ರಾಜೀವ್ ಗಾಂಧಿ ಹತ್ಯೆ ಆಗಿದೆ.

ಆ ಕುಟುಂಬದಲ್ಲಿ ಇಬ್ಬರ ಹತ್ಯೆ ನಡೆದಿರುವುದರಿಂದ ಜೀವಕ್ಕೆ ಅಪಾಯವಿದೆ ಎಂದು ವಿಶೇಷ ಭದ್ರತೆ ನೀಡಲಾಗಿತ್ತು.ಇದನ್ನು ಏಕಾಏಕಿ ಯಾಕೆ ತೆಗೆದರು.ಇದು ದ್ವೇಷದ ರಾಜಕಾರಣ ಎಂದು ಕಾಣುತ್ತದೆ. ಇದರ ಜೊತೆ ಬೇರೆಯವರಿಗೂ ತೆಗೆದುಹಾಕಿದ್ದಾರೆ.ಪ್ರಧಾನಿಗಳದ್ದೂ ಜೀವವೇ, ಆದರೆ ಬೇರೆಯವರಿಗೆ ಯಾಕೆ ತೆಗೆದಿರಿ ಎಂಬ ಪ್ರಶ್ನೆ.ಇದು ಸರ್ವಾಧಿಕಾರಿ ಧೋರಣೆಯನ್ನುತೋರುತ್ತಿದೆ.

ADVERTISEMENT

ಕೂಡಲೇ ಎಸ್‌ಪಿಜಿ ಸೆಕ್ಯುರಿಟಿ ಭದ್ರತೆ ನೀಡಬೇಕು.ಅದನ್ನು ವೈಭವೀಕರಿಸಲು ಅಲ್ಲ, ರಕ್ಷಣೆಗಾಗಿ ನೀಡಬೇಕು.ಪ್ರಧಾನಿ ಹಾಗೂ ಅಮಿತ್ ಶಾ ಅವರನ್ನು ವಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಒತ್ತಾಯ ಮಾಡುತ್ತಿದ್ದೇನೆ.ಇಲ್ಲವಾದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ.

ಯಾರಿಗೆ ಕೇಳಿದರೂ ಈ ಇಬ್ಬರಿಗೂ ಭದ್ರತೆ ನೀಡಬೇಕು ಎಂದು ಹೇಳುತ್ತಾರೆ.ದೇಶಕ್ಕಾಗಿ ಹತ್ಯೆ ಆಗಿರೋದು, ಪ್ರಾಣತ್ಯಾಗ ಮಾಡಿರೋದು ಅಪರೂಪ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿದೇಶಕ್ಕೆ ಹೋದಾಗ ರಾಹುಲ್‌ಗಾಂಧಿ ಎಸ್‌ಪಿಜಿ ದಾರಿ ತಪ್ಪಿಸಿರಬಹುದು.ದೇಶದಲ್ಲಿ ಆ ರೀತಿ ಮಾಡಿಲ್ಲ.ಆ ಕಾರಣ ಇಟ್ಟುಕೊಂಡು ಎಸ್‌ಪಿಜಿ ಭದ್ರತೆ ತೆಗೆಯಲು ಬರೋದಿಲ್ಲ. ಹಾಗಂತ ಅವರ ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ.ಕೇಂದ್ರ ಯಾವುದೇ ಸರ್ವೆ ಮಾಡಿಸಿದ್ದರೂ ಅವರಿಗೆ ಭದ್ರತೆ ಕೊಡಬೇಕು.ಇತರರ ಭದ್ರತೆ ಯಾಕೆ ವಾಪಸ್ ಆಯ್ತು ಗೊತ್ತಿಲ್ಲ.ಆದರೆ ಇವರ ಭದ್ರತೆ ತೆಗೆದಿರೋದು ಸೇಡಿನ ರಾಜಕಾರಣ. ಬಹುಶಃ ಇದನ್ನು ಸಮರ್ಥನೆ ಮಾಡಿಕೊಳ್ಳಲು ಅವರು ಭದ್ರತೆ ವಾಪಸ್ ತೆಗೆದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.