ADVERTISEMENT

ಸಿಇಟಿ: ಪ್ರಾಯೋಗಿಕ ಕೌಶಲ ಪ್ರಶ್ನೆಗಳ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 14:18 IST
Last Updated 31 ಜನವರಿ 2025, 14:18 IST
   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ 2025–26ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಈ ಬಾರಿ ಪ್ರಾಯೋಗಿಕ ಕೌಶಲದ ಪ್ರಶ್ನೆಗಳೂ ಒಳಗೊಂಡಿರುತ್ತವೆ.

ಪ್ರಸ್ತುತ ಇರುವ ಪಿಯು ಪಠ್ಯಕ್ರಮದಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪ್ರಾಯೋಗಿಕ ಪರೀಕ್ಷೆಯ ಕೆಲ ಪ್ರಶ್ನೆಗಳನ್ನು ಸಿಇಟಿ ಪ್ರಶ್ನೆಪತ್ರಿಕೆಗಳಲ್ಲಿ ಸೇರಿಸಲಾಗಿದೆ. ನೀಟ್‌, ಜೆಇಇ ಪರೀಕ್ಷೆಯಲ್ಲೂ ಈಗಾಗಲೇ ಪ್ರಾಯೋಗಿಕ ಕೌಶಲದ ಪ್ರಶ್ನೆಗಳನ್ನು ಅಳವಡಿಸಲಾಗಿದೆ. ಪ್ರಶ್ನೆಗಳನ್ನು ಅಳವಡಿಸಿಕೊಳ್ಳುವ ಮೊದಲು ಆಯಾ ವಿಷಯ ತಜ್ಞರ ಶಿಫಾರಸುಗಳನ್ನು ಪರಿಗಣಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಹೇಳಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆಯ ಭೌತಶಾಸ್ತ್ರ ವಿಷಯದಲ್ಲಿ 14, ರಸಾಯನಶಾಸ್ತ್ರದಲ್ಲಿ 6 ಮತ್ತು ಜೀವಶಾಸ್ತ್ರದಲ್ಲಿ 16 ಪ್ರಾಯೋಗಿಕ ಕೌಶಲ ಪ್ರಶ್ನೆಗಳು ಇರುತ್ತವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.