ADVERTISEMENT

ದಾಖಲಾತಿ ಪರಿಶೀಲನೆ ಇಂದು ಕೊನೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 20:00 IST
Last Updated 28 ಜೂನ್ 2019, 20:00 IST

ಬೆಂಗಳೂರು: 2019ನೇ ಸಾಲಿನ ಯುಜಿ ನೀಟ್‌ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ‌ಕೋರ್ಸ್‌ಗಳ ನೋಂದಣಿಗಾಗಿ ಶುಕ್ರವಾರದವರೆಗೆ‌ಆನ್‌ಲೈನ್‌ನಲ್ಲಿ ಅರ್ಜಿ ನೋಂದಣಿ ಮಾಡಿಕೊಂಡಿರುವ ಅಥವಾ ಈ ಮೊದಲೇ ನೋಂದಣಿ ಮಾಡಿ ದಾಖಲಾತಿ ಪರಿಶೀಲನೆ ಮಾಡದೆ ಇರುವವರು ಶನಿವಾರ ಮಧ್ಯಾಹ್ನ 2ರವರೆಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬಹುದು.

ಎಲ್ಲ ಮೂಲ ದಾಖಲೆ ಪತ್ರಗಳೊಂದಿಗೆ ಪರಿಶೀಲನೆಗೆ ಹಾಜರಾಗಬೇಕು. ಈಗಾಗಲೇ ದಾಖಲಾತಿ ಪರಿಶೀಲನೆ ನಡೆಸಿದವರು ಹಾಜರಾಗುವಂತಿಲ್ಲ.

ಮಾಹಿತಿಗೆ kea.kar.nic.in ವೀಕ್ಷಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಗಿರೀಶ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.