ಬೆಂಗಳೂರು: ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕಿಯರಿಗೂ ಶಿಶುಪಾಲನಾ ರಜೆ (ಸಿಸಿಎಲ್) ಸೌಲಭ್ಯವನ್ನು ವಿಸ್ತರಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಶಿಶುಪಾಲನಾ ರಜೆ ಸೌಲಭ್ಯ ನೀಡಲಾಗಿತ್ತು. ಈ ನಿಯಮದಂತೆ ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ಆರು ತಿಂಗಳ ರಜೆ ಸೌಲಭ್ಯ ಪಡೆಯಲು ಅವಕಾಶವಾಗಿತ್ತು.
2024ರ ಜನವರಿಯಲ್ಲಿ ಅನುದಾನಿತ ಪ್ರೌಢಶಾಲೆಗಳ ಸಿಬ್ಬಂದಿಗೂ ವಿಸ್ತರಿಸಲಾಗಿತ್ತು. ಆದರೆ, ಪ್ರಾಥಮಿಕ ಶಿಕ್ಷಕರಿಗೆ ಸೌಲಭ್ಯ ದೊರೆತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.