ADVERTISEMENT

ಸಾಯುವವರು ಎಲ್ಲಾದರೂ ಸಾಯಲಿ: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಮಾತು ವೈರಲ್‌

​ಪ್ರಜಾವಾಣಿ ವಾರ್ತೆ
Published 17 ಮೇ 2021, 2:32 IST
Last Updated 17 ಮೇ 2021, 2:32 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಚಿತ್ರದುರ್ಗ: ‘ಇಲ್ಲಿ ಆಸ್ಪತ್ರೆ ನಿರ್ಮಿಸುವ ಅಗತ್ಯವಿಲ್ಲ. ಅದಕ್ಕೆ ಬಿಡುವುದೂ ಇಲ್ಲ.ಸಾಯುವವರುಎಲ್ಲಾದರೂಸಾಯಲಿ..’

ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ವಿರುದ್ಧ ಹರಿಹಾಯ್ದ ಪರಿ ಇದು. ಘಟನೆ ನಡೆದ ಒಂದು ದಿನದ ಬಳಿಕ ಈ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಕಾಳಜಿ ತೋರದೇ ಮಾತ
ನಾಡಿದ ಶಾಸಕರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.

ಹೊಳಲ್ಕೆರೆಯ ಕೋವಿಡ್‌ ಆರೈಕೆ ಕೇಂದ್ರದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಬರುತ್ತಿದ್ದರು. ಸಚಿವರು ಬರುವುದಕ್ಕೂ ಮೊದಲೇ ಸ್ಥಳದಲ್ಲಿ ಹಾಜರಿದ್ದ ಡಿಎಚ್‌ಒ ಹಾಗೂ ಶಾಸಕರ ನಡುವೆ ಚರ್ಚೆ ನಡೆದಿದೆ. ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಗೆ ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಉಂಟಾಗುತ್ತಿರುವ ವಿಳಂಬ ಶಾಸಕರನ್ನು ಕೆರಳಿಸಿದೆ. ಆಮ್ಲಜನಕದ ಕೊರತೆ ಇರುವ ಬಗ್ಗೆ ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದಾಗ ಶಾಸಕರು ಹೀಗೆ ಕಿಡಿಕಾರಿದ್ದಾರೆ.

ADVERTISEMENT

ತೇಜೋವಧೆ ಪ್ರಯತ್ನ: ‘ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆಗೆ ಸಂಬಂಧಿಸಿ ದಂತೆ ಆಧಿಕಾರಿಗಳೊಂದಿಗೆ ಸುಮಾರು 20 ನಿಮಿಷ ಚರ್ಚೆ ನಡೆಸಿದ್ದೇನೆ. ಇದರಲ್ಲಿ 20 ಸೆಕೆಂಡ್‌ ವಿಡಿಯೊ ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ತೇಜೋವಧೆ ಮಾಡುವ ಪ್ರಯತ್ನ’ ಎಂದು ಶಾಸಕ ಎಂ.ಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

‘ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ 50 ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, 10 ಹಾಸಿಗೆಗೆ ಮಾತ್ರ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚುವರಿ ಸೋಂಕಿತರು ಆಸ್ಪತ್ರೆಗೆ ಬಂದರೆ ತೊಂದರೆ ಉಂಟಾಗುತ್ತದೆ. ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದೇನೆಯೇ ಹೊರತು ಕೆಟ್ಟ ನಡವಳಿಕೆ ತೋರಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.