ಬೆಂಗಳೂರು: ‘ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾಪದ ಅವಶ್ಯವೇ ಇಲ್ಲ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
‘ಡಿಸೆಂಬರ್ ವೇಳೆಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ಶಾಸಕ ಬಸವರಾಜು ಶಿವಗಂಗಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ‘ಈ ವಿಷಯದ ಬಗ್ಗೆ ನಮ್ಮ ವರಿಷ್ಠರು ಈಗಾಗಲೇ ಮಾತನಾಡಿದ್ದಾರೆ. ತುಟಿಕ್ ಪಿಟಿಕ್ ಎನ್ನದಂತೆ ಹೈಕಮಾಂಡ್ ಎಲ್ಲರಿಗೂ ತಾಕೀತು ಮಾಡಿದೆ’ ಎಂದರು.
‘ಕೊಟ್ಟ ಮಾತಿನಂತೆ ನಾವು ಒಳ್ಳೆಯ ಆಡಳಿತ ಕೊಡುತ್ತಿದ್ದೇವೆ. ಹೀಗಾಗಿ ಬೇರೆ ವಿಚಾರಗಳು ಈಗ ಅಪ್ರಸ್ತುತ. ಬಸವರಾಜು ಶಿವಗಂಗಾ ಅವರು ನೀಡಿರುವ ಹೇಳಿಕೆ ಬಗ್ಗೆ ಹೈಕಮಾಂಡ್
ನವರು ನೋಡಿಕೊಳ್ಳುತ್ತಾರೆ’ ಎಂದರು.
ನಮ್ಮ ಬೆಂಬಲವಿದೆ: ‘ಜಾತಿವಾರು ಸಮೀಕ್ಷೆಗೆ ನಮ್ಮ ಬೆಂಬಲವಿದೆ. ಲಿಂಗಾಯತರಲ್ಲಿ ನೂರು ಒಳಪಂಗಡ
ಗಳಿದ್ದು, ಗೊಂದಲಗಳಿವೆ. ಸಾಮಾಜಿಕ, ಶೈಕ್ಷಣಿಕ ಮೀಸಲಾತಿಗಾಗಿ ಸಮೀಕ್ಷೆಯಲ್ಲಿ ತಮ್ಮ ತಮ್ಮ ಜಾತಿ ನಮೂದಿಸುತ್ತಾರೆ. ಗೊಂದಲಗಳನ್ನು ಮಠಾಧೀಶರು ಸರಿ ಮಾಡಬೇಕು’ ಎಂದರು.
ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ಬಿಡುವುದನ್ನು ನಿಷೇಧಿಸಿರುವ ಕುರಿತು ಪ್ರತಿಕ್ರಿಯಿಸಿದ ಖಂಡ್ರೆ, ‘ಅರಣ್ಯವಾಸಿಗಳಿಗೆ ಕಾನೂನಿನಲ್ಲಿ ಸಡಿಲಿಕೆಯಿದೆ. ಬೇರೆ ಕಡೆಯಿಂದ
ಜಾನುವಾರುಗಳನ್ನು ತಂದು ಬಿಡಲು ಅವಕಾಶ ಇಲ್ಲ’ ಎಂದೂ ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.