ಸತೀಶ ಜಾರಕಿಹೊಳಿ
ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಇಲ್ಲಿ ಕುಳಿತು ಹೇಳೋಕಾಗಲ್ಲ, ಬೆಂಗಳೂರಿಗೆ ಬಂದು ಕೇಳಿ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಮಂಗಳವಾರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದ ಅವರು, 'ನಮ್ಮದೇ ಸಚಿವ ಸ್ಥಾನ ಉಳಿಸಿಕೊಳ್ಳೋದು ಕಷ್ಟ ಆಗಿದೆ, ಸಿಎಂ ಬದಲಾವಣೆ ಆಗ್ತಾರೆ ಅಂದ್ರೆ ನಾವೇನು ಹೇಳೋದು. ನೀವು ಬೆಂಗಳೂರಿಗೆ ಬಂದ್ರೆ ನಾನೇ ಸಿಎಂ ಅವರನ್ನ ಭೇಟಿ ಮಾಡಿಸ್ತೀನಿ, ಕೇಳಿ' ಎಂದರು.
'ದಲಿತ ಸಚಿವರು_ಶಾಸಕರ ಸಭೆಯನ್ನ ಮುಂದೇನೂ ಮಾಡ್ತೀವಿ, ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಏನೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು.
'ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮುಗಿದು ಹೋದ ಅಧ್ಯಾಯ. ಅದು ಬಂದಾಗ ನೋಡೋಣ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.