ADVERTISEMENT

ಯಾವುದೇ ತನಿಖೆಗೂ ಹೆದರಿಲ್ಲ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:13 IST
Last Updated 14 ಏಪ್ರಿಲ್ 2019, 19:13 IST
   

ಬೆಂಗಳೂರು: ‘ನಾನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿಲ್ಲ. ಯಾವುದೇ ತನಿಖೆಗೆ ಭಯಪಟ್ಟಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ಎದುರಿಸಿದ್ದರು. ನಾನು ಅವರ ಮಟ್ಟಕ್ಕೆ ಇಳಿದಿಲ್ಲ. ಅಮಾಯಕರನ್ನು ಬಲಿ ಪಡೆದ ಮೋದಿ ಅವರಿಂದ ನೀತಿಪಾಠ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

‘ಐಟಿ ದಾಳಿ ವಿರೋಧಿಸಿ ನಾವು ಪ್ರತಿಭಟನೆ ನಡೆಸಿದ್ದನ್ನು ಮೋದಿ ಅವರು ಲೇವಡಿ ಮಾಡುತ್ತಾರೆ. ಐಟಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿದೆಯೇ’ ಎಂದು ಅವರು ಪ್ರಶ್ನಿಸಿದರು. ‘ದೇವೇಗೌಡರು ಹಳ್ಳಿಯೊಂದರಲ್ಲಿ ಮನೆಯೊಂದಕ್ಕೆ ಊಟಕ್ಕೆ ಹೋದರು. ಮರುದಿನ ಆ ಮನೆ ಮೇಲೆ ಐಟಿ ದಾಳಿಯಾಯಿತು. ಇದು ಮಾನವೀಯತೆ ಇರುವ ಸರ್ಕಾರವೇ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮದು ರಿಮೋಟ್‌ ಕಂಟ್ರೋಲ್‌ ಸರ್ಕಾರ ಎಂದು ಮೋದಿ ಟೀಕಿಸಿದ್ದಾರೆ. ಪ್ರಧಾನಿ ಯಾವ ರಿಮೋಟ್‌ ಕಂಟ್ರೋಲ್‌ನಲ್ಲಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ನಾನು ಯಾವ ನಿಯಂತ್ರಣದಲ್ಲೂ’ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.