ಕುದೂರು: ಡೆಂಗಿ ಜ್ವರಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕುದೂರಿನ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಪಟ್ಟಣದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ, ಮಹಾತ್ಮನಗರ ಬಡಾವಣೆ ನಿವಾಸಿ ಹೇಮಾ (19) ಮೃತ ಯುವತಿ.
ಹೇಮಾ ಅವರ ಸಹೋದರ ಮತ್ತು ತಾಯಿಗೂ ಕೆಲ ದಿನಗಳ ಹಿಂದೆ ಡೆಂಗಿ ಜ್ವರ ಕಾಣಿಸಿತ್ತು. ತಾಯಿ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ
ಹಾಗೂ ಸಹೋದರ ನೆಲಮಂಗಲ ಆಸ್ಪತ್ರೆ
ಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದರ ಬೆನ್ನಲ್ಲೇ ಹೇಮಾಗೂ ಡೆಂಗಿ ಜ್ವರ ಬಂದಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ಡೆಂಗಿ ಜ್ವರದಿಂದಲೇ ಹೇಮಾ ಮೃತ
ಪಟ್ಟಿರುವುದು ಇನ್ನೂ ಖಚಿತವಾಗಿಲ್ಲ. ಪರಿಶೀಲಿಸಲು ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ
ಡಾ. ನಿರಂಜನ್ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.