ADVERTISEMENT

ಲಾ ಸ್ಕೂಲ್‌ ಮೌಲ್ಯಮಾಪನಕ್ಕೆ ಆಯೋಗ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 21:13 IST
Last Updated 21 ಜುಲೈ 2023, 21:13 IST
   

ಬೆಂಗಳೂರು: ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’ಯ 2023-24ನೇ ಸಾಲಿನ ಸಮಗ್ರ ಮೌಲ್ಯಮಾಪನಕ್ಕಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ‘ಪರಿಶೀಲನಾ ಆಯೋಗ’(ಎಸ್‌ಆರ್‌ಸಿ) ನೇಮಿಸಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ತಿಮೋತಿ ಎಂಡಿಕಾಟ್‌ ಅಧ್ಯಕ್ಷರಾಗಿ, ಬೊನಾವೆರೊ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್‌ ನಿರ್ದೇಶಕ ಕ್ಯಾಥರೀನ್‌ ಒ'ರೇಗನ್‌, ಲೆಸ್ಟರ್‌ ಕಿಸ್ಸೆಲ್‌ನ ಕಾನೂನು ಪ್ರಾಧ್ಯಾಪಕ ಡೇವಿಡ್ ಬಿ. ವಿಲ್ಕಿನ್ಸ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಚಂದ್ರಚೂಡ್ ಅವರು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. 

ಆಯೋಗವು ವಿಶ್ವವಿದ್ಯಾಲಯದ ಎಲ್ಲಾ ಅಂಶಗಳ ಸಮಗ್ರ ಪರಿಶೀಲನೆ ನಡೆಸುತ್ತದೆ. 2024ರ ಶೈಕ್ಷಣಿಕ ವರ್ಷ ಮುಗಿಯುವುದರ ಒಳಗೆ ಶಿಫಾರಸುಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.