ADVERTISEMENT

ಎಸ್‌ಸಿಪಿ– ಟಿಎಸ್‌ಪಿ: ದಲಿತ ಉದ್ಯಮಿಗಳಿಗೆ ಷರತ್ತು ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 16:30 IST
Last Updated 16 ಫೆಬ್ರುವರಿ 2021, 16:30 IST

ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನದಡಿ ಎರಡೂ ಸಮುದಾಯಗಳ ಉದ್ಯಮಿಗಳಿಗೆ ನಿವೇಶನ, ಮಳಿಗೆ ಖರೀದಿಗೆ ನೆರವು ನೀಡುವ ಕಾರ್ಯಕ್ರಮದ ಷರತ್ತು ಸಡಿಲಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಕರ್ನಾಟಕ ದಲಿತ ಉದ್ಯಮಿಗಳ ಸಂಘ ಹೇಳಿದೆ.

‘ಹಿಂದೆ ಶೇಕಡ 50ರಷ್ಟು ನೆರವು ನೀಡುವಾಗ ಯಾವುದೇ ನಿರ್ಬಂಧವಿರಲಿಲ್ಲ. ನೆರವಿನ ಮೊತ್ತವನ್ನು ಶೇ 75ಕ್ಕೆ ಹೆಚ್ಚಿಸುವಾಗ ಗರಿಷ್ಠ ₹ 2 ಕೋಟಿ ಅಥವಾ ಎರಡು ಎಕರೆ ಜಮೀನಿನ ಮಿತಿ, ಅನುದಾನದ ಲಭ್ಯತೆ ಮತ್ತಿತರ ಷರತ್ತುಗಳನ್ನು ಹಾಕಲಾಗಿತ್ತು. ಈ ಷರತ್ತುಗಳನ್ನು ಕೈಬಿಡುವಂತೆ ಮನವಿ ಮಾಡಲಾಗಿತ್ತು. ಶೇ 50ರ ನೆರವು ನೀಡುವಾಗ ಇದ್ದ ಷರತ್ತುಗಳನ್ನೇ ಮುಂದುವರಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT