ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ, ಮಾಜಿ ಶಾಸಕ ಎನ್. ಸಂಪಂಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅಗಾ ಸುಲ್ತಾನ್, ಎಂ.ಎ. ಗಫೂರ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಸೇರಿದಂತೆ ಒಟ್ಟು 39 ಮಂದಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಕರುಣಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಬುಧವಾರ ಪಟ್ಟಿ ಪ್ರಕಟಿಸಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಆರೋಪದ ಮೇಲೆ ಶಾಸಕ ವಿನಯ್ ಕುಲಕರ್ಣಿ ಜೈಲಿನಲ್ಲಿರುವ ಕಾರಣಕ್ಕೆ ಅವರ ಪತ್ನಿಗೆ ವಿನಯ್ ಅವರು ನಿಭಾಯಿಸುತ್ತಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಿ ಕೆ.ಸಿ. ವೇಣುಗೋಪಾಲ್ ಅವರಿಗೆ ಸಲ್ಲಿಸಿದ್ದರು. ಅವರು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಟ್ಟಿ ರವಾನಿಸಿದ್ದರು.
ಖರ್ಗೆ ಅವರಿಂದ ಅನುಮೋದನೆ ಪಡೆದ ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿಗೆ ರವಾನಿಸಿದ್ದಾರೆ. ಬಿಹಾರ ಪ್ರವಾಸದಿಂದ ಮುಖ್ಯಮಂತ್ರಿ ಹಿಂದಿರುಗಿದ ತಕ್ಷಣ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೇಮಕಾತಿ ಆದೇಶ ಹೊರಡಿಸಲಿದೆ.
ನಿಗಮ– ಮಂಡಳಿ ನೇಮಕ ಪಟ್ಟಿ
ಶಿವಲೀಲಾ ಕುಲಕರ್ಣಿ; ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಪಿ. ರಘು; ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ
ಅರುಣ್ ಪಾಟೀಲ್; ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ನಿಗಮ
ವಡ್ನಾಳ್ ಜಗದೀಶ್; ಕರ್ನಾಟಕ ಜೀವವೈವಿಧ್ಯ ಮಂಡಳಿ
ಮುರಳಿ ಅಶೋಕ್; ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಡಾ. ಮೂರ್ತಿ; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
ಕರ್ನಲ್ ಮಲ್ಲಿಕಾರ್ಜುನ್; ಮಾಜಿ ಸೈನಿಕರ ಕಲ್ಯಾಣ ಮಂಡಳಿ
ಡಾ. ಬಿ. ಸಿ. ಮುದ್ದು ಗಂಗಾಧರ್; ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
ಶಾಲೆಟ್ ಪಿಂಟೊ; ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ
ಮರಿಯೋಜಿ ರಾವ್; ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ
ಎಂ.ಎ. ಗಫೂರ್; ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಕೆ. ಹರೀಶ್ ಕುಮಾರ್; ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ಎನ್. ಸಂಪಂಗಿ: ಕರ್ನಾಟಕ ಗೋದಾಮು ನಿಗಮ
ವೈ. ಸಯೀದ್ ಅಹಮದ್;ದೇವರಾಜ್ ಅರಸ್ ಟ್ರಕ್ ಟರ್ಮಿನಲ್
ಮಹೇಶ್;ಕಾಡುಗೊಲ್ಲ ಅಭಿವೃದ್ಧಿ ನಿಗಮ
ಮಂಜಪ್ಪ; ಬಯಲು ಸೀಮೆ ಅಭಿವೃದ್ಧಿ ಮಂಡಳಿ
ಧರ್ಮಣ್ಣ ಉಪ್ಪಾರ; ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
ಅಗಾ ಸುಲ್ತಾನ್; ಕೇಂದ್ರ ಪರಿಹಾರ ಸಮಿತಿ
ಎಸ್. ಜಿ. ನಂಜಯ್ಯನ ಮಠ; ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ
ಆಂಜನಪ್ಪ: ಕರ್ನಾಟಕ ಬೀಜ ಅಭಿವೃದ್ಧಿ ನಿಗಮ ನಿಯಮಿತ
ನೀಲಕಂಠ ಮುಲ್ಗೆ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಬಾಬು ಹೊನ್ನ ನಾಯ್ಕ್; ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)
ಯುವರಾಜ್ ಕದಂ; ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು (ಕಾಡಾ), ಬೆಳಗಾವಿ
ಜಮಾದಾರ್ ಅನಿಲ್ ಕುಮಾರ್; ಕರ್ನಾಟಕ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ, ಕಲಬುರಗಿ
ಪ್ರವೀಣ್ ಹರ್ವಾಲ್; ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ
ಮಂಜುನಾಥ್ ಪೂಜಾರಿ; ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ
ಸೈಯದ್ ಮೆಹಮೂದ್ ಚಿಸ್ತಿ; ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ
ಎಂ. ಎಸ್. ಮುತ್ತುರಾಜ್;ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
ನಂಜಪ್ಪ; ಕರ್ನಾಟಕ ಮಡಿವಾಲ ಮಾಚಿ ದೇವ ಅಭಿವೃದ್ಧಿ ನಿಗಮ
ವಿಶ್ವಾಸ ದಾಸ್; ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ
ಆರ್. ಸತ್ಯನಾರಾಯಣ; ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
ಗಂಗಾಧರ್; ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ
ಶಿವಪ್ಪ; ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
ಬಿ.ಎಸ್. ಕವಲಗಿ; ಕರ್ನಾಟಕ ರಾಜ್ಯ ಸುಣ್ಣ ಅಭಿವೃದ್ಧಿ ಮಂಡಳಿ
ಶ್ರೀನಿವಾಸ ವೇಲು; ಕುಂಬಾರ ಅಭಿವೃದ್ಧಿ ನಿಗಮ
ಟಿ.ಎಂ. ಶಾಹೀದ್ ತಕ್ಕಿಲ್; ಕರ್ನಾಟಕ ರಾಜ್ಯ ಕನಿಷ್ಠ ವೇತನ ಮಂಡಳಿ
ಚೇತನ್ ಕೆ. ಗೌಡ; ಕರ್ನಾಟಕ ಸ್ಟೇಟ್ ಕೈಮಗ್ಗ ಮೂಲ ಸೌಲಭ್ಯ (ಪವರ್ ಲೂಮ್ಸ್) ಮಂಡಳಿ
ಶರಣಪ್ಪ ಸಾರದ್ಪುರ್; ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ
ಲಾವಣ್ಯ ಬಲ್ಲಾಳ್ ಜೈನ್; ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಏಜೆನ್ಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.