ADVERTISEMENT

ಅಯೋಧ್ಯೆಯಲ್ಲಿ ಬಿಜೆಪಿಯ ವಿಶ್ವಗುರು ರಾಜಕೀಯ ಕಾರ್ಯಕ್ರಮ: ಬಿ.ಕೆ. ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 18:31 IST
Last Updated 21 ಜನವರಿ 2024, 18:31 IST
ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್   

ಚಿಕ್ಕಮಗಳೂರು: ‘ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಬಿಜೆಪಿಯ ವಿಶ್ವಗುರು ರಾಜಕೀಯ ಕಾರ್ಯಕ್ರಮ. ನಾವು ಭೂತ, ದೆವ್ವಗಳನ್ನು ಪೂಜೆ ಮಾಡುವವರು. ಭೂತದ ಬಳಿಯೇ ಹೋಗುತ್ತೇವೆ’ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವರ ಕಾರ್ಯಕ್ರಮಕ್ಕೆ ಆಮಂತ್ರಣ ಬೇಕಿಲ್ಲ. ಆಮಂತ್ರಣ ನೀಡಲು ಇವರು ಯಾರು?. ಶಂಕರರು ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ. ಶಂಕರ ಪರಂಪರೆಯವರು ಯಾರೂ ಹೋಗುತ್ತಿಲ್ಲ. ವಿಶ್ವಗುರು ಏನೆಂಬುದು ದೇಶಕ್ಕೆ ಗೊತ್ತಿದೆ’ ಎಂದರು.

‘ನಾನು ವಲಸೆ ಪ್ರಾಣಿ ಅಲ್ಲ’

ADVERTISEMENT

‘ಅಧಿಕಾರಕ್ಕಾಗಿ ವಲಸೆ ಬಂದ ಪ್ರಾಣಿ ನನಲ್ಲ. ಅದಕ್ಕಾಗಿ ಪಕ್ಷಾಂತರ ಮಾಡುವವನೂ ಅಲ್ಲ. ಕೆಲವರು ಕಾಂಗ್ರೆಸ್‌ ನಮ್ಮದೇ ಎನ್ನುತ್ತಿದ್ದಾರೆ. ಅದಕ್ಕೇ ನನ್ನ ಅಸಮಾಧಾನ’ ಎಂದು ಹರಿಪ್ರಸಾದ್ ಸ್ವಪಕ್ಷದ ನಾಯಕರನ್ನೇ ಹೆಸರು ಹೇಳದೆ ಟೀಕಿಸಿದರು.

‘ನನಗೆ ಕಾಂಗ್ರೆಸ್‌ ಮೇಲೂ ಅಸಮಾಧಾನ ಇಲ್ಲ. ವಿದ್ಯಾರ್ಥಿ ಆಗಿದ್ದಾಗಿನಿಂದ ಕಾಂಗ್ರೆಸ್‌ನಲ್ಲಿ ಇದ್ದೀನಿ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ. ಅವರ ಮೇಲೆ ಏಕೆ ಸಿಟ್ಟು ಮಾಡೋಣ’ ಎಂದರು.  ‘ನಿಗಮ ಮಂಡಳಿ ನೇಮಕ ವಿಚಾರವನ್ನು ಸರ್ಕಾರದವರನ್ನೇ ಕೇಳಬೇಕು. ನಾನು ಸರ್ಕಾರದಲ್ಲಿ ಇಲ್ಲ ಹೊರಗಡೆ ಇದ್ದೀನಿ. ಯಾವ ಮಾನದಂಡ ಅನುಸರಿಸುತ್ತರೋ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.