ADVERTISEMENT

ಪ್ರಧಾನಿ ನರೇಂದ್ರ ಮೋದಿ ಆಧುನಿಕ ಭಸ್ಮಾಸುರನಿದ್ದಂತೆ: ವಿ.ಎಸ್.ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 13:16 IST
Last Updated 17 ಜನವರಿ 2020, 13:16 IST
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ
ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ   

ತುಮಕೂರು: ಮೋದಿ ಕೈ ಹಾಕುವ ಕೆಲಸಗಳೆಲ್ಲಾ ಭಸ್ಮವಾಗುತ್ತಿದ್ದು, ಅವರೊಬ್ಬ ಆಧುನಿಕ ಭಸ್ಮಾಸುರನಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ದೇಶದ ಆರ್ಥಿಕತೆ ಕಷ್ಟದ ಸ್ಥಿತಿಯಲ್ಲಿದೆ. ಮೋದಿಯವರು ಭಾರತವನ್ನು ಬಡತನ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಕ್ಕಿಂತ ಕೆಳಹಂತಕ್ಕೆ ನೂಕಿದ್ದಾರೆ. ಇದೇ ಮೋದಿ ಅವರ ಅಚ್ಚೇದಿನ್ ಇರಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಟ್ರಂಪ್ ಭಯ: ಮೋದಿಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಭಯ ಇರಬೇಕು. ಹಾಗಾಗಿ ಕ್ರಿಶ್ಚಿಯನ್‌ ಹೊರತುಪಡಿಸಿ, ಮುಸ್ಲಿಮರಿಗೆ ಮಾತ್ರ ಈ ಕಾಯ್ದೆ ಅನ್ವಯಿಸುವಂತೆ ಮಾಡಿದ್ದಾರೆ. ಕೇವಲ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದಿಂದ ಬರುವ ಹಿಂದೂಗಳಿಗೆ ಮಾತ್ರವೇ ಪೌರತ್ವ ನೀಡುತ್ತಾರಂತೆ. ಸಿಲೋನ್, ಬರ್ಮಾ, ನೇಪಾಳದಲ್ಲೂ ಹಿಂದೂಗಳಿದ್ದಾರೆ ಅವರಿಗೇಕೆ ಪೌರತ್ವ ನೀಡುವುದಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ಕಾಮ, ಕ್ರೋಧ, ಮದ, ಮಾತ್ಸರ್ಯ, ಮೋಹ, ಲೋಭ ಮೀರಿದವರು ಸ್ವಾಮೀಜಿಗಳಾಗಬೇಕು. ಆದರೆ, ಕೆಲ ಸ್ವಾಮೀಜಿಗಳಿಗೆ ಅಧಿಕಾರದ ಮೋಹ ಏಕೆ ಎಂದು ತಿಳಿಯುತ್ತಿಲ್ಲ. ಯಾರೋ ಒಬ್ಬರು ಸ್ವಾಮೀಜಿ ಹೇಳಿದ್ದಕ್ಕೆಯಡಿಯೂರಪ್ಪನವರು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಇಂತಹ ದುರ್ಬಲ ಮನಸ್ಥಿತಿಯುಳ್ಳ ಮುಖ್ಯಮಂತ್ರಿಯಿಂದ ಅಭಿವೃದ್ಧಿ ಸಾಧ್ಯವೇ? ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.