ADVERTISEMENT

100 ಕಾಂಗ್ರೆಸ್‌ ಕಚೇರಿಗಳ ಶಂಕು ಸ್ಥಾಪನೆಗೆ ನ.20ರ ಗಡುವು; ಡಿಕೆಶಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 15:51 IST
Last Updated 26 ಅಕ್ಟೋಬರ್ 2025, 15:51 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ಬೆಂಗಳೂರು: ‘ಗಾಂಧಿ ಭಾರತ–100’ ವರ್ಷಾಚರಣೆಯ ಕಾರಣಕ್ಕೆ ರಾಜ್ಯದಲ್ಲಿ ನಿರ್ಮಿಸಲು ಉದ್ದೇಶಿಸಿದ 100 ಕಾಂಗ್ರೆಸ್‌ ಕಚೇರಿಗಳ ಶಂಕು ಸ್ಥಾಪನೆಗೆ ನ.20ರ ಗಡುವು ನಿಗದಿಪಡಿಸಲಾಗಿದೆ. ಈ ವಿಚಾರದಲ್ಲಿ ಈವರೆಗಿನ ಮಾಹಿತಿಯನ್ನು ತಕ್ಷಣ ನೀಡುವಂತೆ ಎಲ್ಲ ಸಚಿವರು, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. 

‘ಗಾಂಧಿ ಭಾರತ ಶತಮಾನೋತ್ಸವ’ ಕಾರ್ಯಕ್ರಮ ಅಂತಿಮ ಹಂತಕ್ಕೆ ಬಂದಿರುವುದರಿಂದ 100 ಕಾಂಗ್ರೆಸ್‌ ಕಚೇರಿಗಳನ್ನು ನಿರ್ಮಿಸಲು ಉದ್ದೇಶಿಸಿರುವ ನಿವೇಶನಗಳಲ್ಲಿ ಏಕಕಾಲಕ್ಕೆ ಶಂಕು ಸ್ಥಾಪನೆ ನೆರವೇರಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಒಪ್ಪಿದ್ದಾರೆ. ಹೀಗಾಗಿ, ನಿವೇಶನಗಳನ್ನು ಇನ್ನೂ ಅಂತಿಮಗೊಳಿಸದವರು ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ನಿವೇಶನಗಳನ್ನು ಖರೀದಿಸಲು ಸರ್ಕಾರದ ಅಧೀನ ಸಂಸ್ಥೆಗಳಾದ ನಗರ ಯೋಜನಾ ಪ್ರಾಧಿಕಾರಗಳು, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಗಳ ಮಂಜೂರಾತಿ ಪಡೆದು ನೋಂದಣಿ ಮಾಡಿಕೊಳ್ಳಬೇಕಿದೆ. ಯಾವ್ಯಾವ ಸ್ಥಳದಲ್ಲಿ ನಿವೇಶನ ನೋಂದಣಿ ಆಗಿದೆ ಮತ್ತು ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂಬ ಮಾಹಿತಿಯನ್ನು ತಕ್ಷಣ ಕಳುಹಿಸುವಂತೆ ಎಐಸಿಸಿ ಸೂಚಿಸಿದೆ. ಎಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಕ್ಷೇತ್ರಗಳಲ್ಲಿ ನಿವೇಶನ ಹೊಂದಲು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.