ADVERTISEMENT

ಬಡವರಿಗೆ ಬಿಜೆಪಿ ಒಂದೇ ಒಂದು ಸೂರು ಕೊಟ್ಟಿದ್ದರೆ ಇಂದೇ ರಾಜೀನಾಮೆ: ಜಮೀರ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 10:26 IST
Last Updated 6 ಅಕ್ಟೋಬರ್ 2025, 10:26 IST
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್   

ಕೊಪ್ಪಳ: 'ರಾಜ್ಯದ ಒಬ್ಬ ಬಡವನಿಗಾದರೂ ಬಿಜೆಪಿ ತನ್ನ ಆಡಳಿತದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದರೆ ರಾಜ್ಯಪಾಲರ ಬಳಿ ಹೋಗಿ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವೆ' ಎಂದು ವಸತಿ ಖಾತೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.

ನಗರದಲ್ಲಿ ಸೊಮವಾರ ನಡೆದ ಸಾಧನಾ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ರೋಷಾವೇಷದಿಂದ ಮಾತನಾಡಿದ ಅವರು 'ಚುನಾವಣೆಯ ಸಮಯದಲ್ಲಿ ಭರವಸೆ ನೀಡದಿದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಸೂರು‌ ನಿರ್ಮಿಸಿಕೊಟ್ಟಿದ್ದೇವೆ. ಇದು ನಮ್ಮ ಆರನೆ ಗ್ಯಾರಂಟಿಯಾಗಿದೆ. ಬಿಜೆಪಿ ಇಂಥ ಒಳ್ಳೆಯ ಕೆಲಸ ಒಂದಾದರೂ ಮಾಡಿದೆಯಾ' ಎಂದು ಪ್ರಶ್ನಿಸಿದರು.

'ಬಿಜೆಪಿ ಸದಾ ಧಮ್ಮು, ತಾಕತ್ತು ಎಂದು ಮಾತನಾಡುತ್ತ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಬಿಜೆಪಿ ರಾಜ್ಯದಲ್ಲಿ ಸ್ವಂತ ಶಕ್ತಿಯಲ್ಲಿ ಎಂದೂ ಅಧಿಕಾರಕ್ಕೆ ಬಂದಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.