ADVERTISEMENT

ಬಿಜೆಪಿಯ ಸ್ಮಾರ್ಟ್ ಸಿಟಿ ಯೋಜನೆ ಬಣ್ಣ ಮಳೆಯಲ್ಲಿ ತೊಳೆದು ಹೋಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 11:21 IST
Last Updated 19 ಅಕ್ಟೋಬರ್ 2021, 11:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ಸರ್ಕಾರದ ‘ಸ್ಮಾರ್ಟ್ ಸಿಟಿ’ ಎಂಬ ಯೋಜನೆ ಕೇವಲ ಕಣ್ಕಟ್ಟಿಗೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರಿನ ರಸ್ತೆಗಳ ಬಗ್ಗೆ ‘ಪ್ರಜಾವಾಣಿ’ ಪ್ರಕಟಿಸಿದ್ದ ವಿಶೇಷ ವರದಿಯನ್ನು ಉಲ್ಲೇಖಿಸಿಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಬಿಜೆಪಿಯ ‘ಸ್ಮಾರ್ಟ್ ಸಿಟಿ’ ಎಂಬ ಕಣ್ಕಟ್ಟು ಯೋಜನೆಯ ಬಣ್ಣ ಮಳೆಯಲ್ಲಿ ತೊಳೆದುಕೊಂಡು ಹೋಗಿದೆ. ಸ್ಮಾರ್ಟ್ ಸಿಟಿ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವು, ಗುತ್ತಿಗೆದಾರರ ಜತೆ ಆ ಪಕ್ಷದ ನಾಯಕರೂ ಕಮಿಷನ್ ನುಂಗಿರುವ ಸಂಶಯ ಸೃಷ್ಟಿಸಿದೆ. ಈವರೆಗೂ ‘ಸ್ಮಾರ್ಟ್ ರಸ್ತೆ’ಯ ಗುಂಡಿಗಳಿಗೆ ಬಿದ್ದ ₹191 ಕೋಟಿಗೆ ಹೊಣೆ ಯಾರು’ ಎಂದು ಟ್ವೀಟ್‌ ಮೂಲಕ ಕಾಂಗ್ರೆಸ್ ಪ್ರಶ್ನಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.