ADVERTISEMENT

ತಾಲಿಬಾನ್ ಆಡಳಿತದ ಧೋರಣೆ ನಮ್ಮ ಕಣ್ಣೆದುರೇ ಜರುಗುತ್ತಿದೆ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 7:10 IST
Last Updated 16 ಜುಲೈ 2022, 7:10 IST
   

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಮಾಡದಂತೆ ಆದೇಶ ಹೊರಡಿಸಿದ್ದ ಹೊರಡಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಣೆ ವೇಳೆಯಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿ‌ತ್ತು.

ಇದಕ್ಕೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಎಚ್ಚೆತ್ತುಕೊಂಡ ಸರ್ಕಾರ,ಜುಲೈ 15ರ (ಶುಕ್ರವಾರ) ತಡರಾತ್ರಿ ಆದೇಶ ವಾಪಸ್ ಪಡೆದಿದೆ. ಆದಾಗ್ಯೂ ಸರ್ಕಾರದ ಧೋರಣೆಯನ್ನು ಟೀಕಿಸಿರುವ ಕಾಂಗ್ರೆಸ್‌, ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

ಪತ್ರಿಕೆಗಳು ಬರೆಯಬಾರದು,ಪತ್ರಕರ್ತರು ಪ್ರಶ್ನೆ ಕೇಳಬಾರದು,ಜನತೆ ಪ್ರತಿಭಟಿಸಬಾರದು,ಮುಕ್ತವಾಗಿ ತಿನ್ನಬಾರದು,ಸಂಸತ್ತಿನಲ್ಲಿ ಮಾತಾಡಬಾರದು,ಕಚೇರಿಗಳಲ್ಲಿ ಚಿತ್ರೀಕರಿಸಬಾರದು,ಹಾಸ್ಯ ಮಾಡಬಾರದು,ವ್ಯಂಗ್ಯ ಚಿತ್ರ ಬಿಡಿಸಬಾರದು ಎಂಬಿತ್ಯಾದಿ ಹೇಳಿಕೆಗಳುತಾಲಿಬಾನ್‌ನಿಂದ ಕೇಳಿಬರುತ್ತಿದ್ದವು. ಈಗ ನಮ್ಮಲ್ಲೇ ಕಣ್ಣೆದುರು ಜರುಗುತ್ತಿದೆ ಎಂದು ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.