ADVERTISEMENT

ಶಿಕ್ಷಣದ ವಿಚಾರದಲ್ಲಿ ಮಕ್ಕಳಾಟ ಆಡುತ್ತಿರುವ ಸಚಿವ ನಾಗೇಶ್: ಕಾಂಗ್ರೆಸ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2022, 11:35 IST
Last Updated 22 ಜುಲೈ 2022, 11:35 IST
ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌
ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌   

ಬೆಂಗಳೂರು: ಶಿಕ್ಷಣ ಇಲಾಖೆಯುದಿನಕ್ಕೊಂದು ರೀತಿಯ ಆದೇಶ ಹೊರಡಿಸುತ್ತಿದೆ. ಇದು ಇಲಾಖೆಯ ದ್ವಂದ್ವ ಹಾಗೂ ಬೇಜವಾಬ್ದಾರಿ ನಿಲುವಾಗಿದೆ ಎಂದುನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಆಕ್ಷೇಪ ವ್ಯಕ್ತಪಡಿಸಿದೆ.ಈ ಸಂಬಂಧ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

'ಪಠ್ಯ ಪರಿಷ್ಕರಣೆಯ ಅವಾಂತರದಿಂದ ಹಿಡಿದು ಸೈಕಲ್, ಶೂ ಸಾಕ್ಸ್ ನೀಡದಿರುವ ವೈಫಲ್ಯದವರೆಗೆ ಶಿಕ್ಷಣ ಇಲಾಖೆಯ ಅಧ್ವಾನಗಳು ಒಂದೆರಡಲ್ಲ.ಮಕ್ಕಳ ಶಿಕ್ಷಣದ ವಿಚಾರದಲ್ಲಿ 'ಮಕ್ಕಳಾಟ' ಆಡುತ್ತಿರುವ ಬಿ.ಸಿ. ನಾಗೇಶ್‌ ಅವರಿಗೆಸಚಿವ ಸ್ಥಾನದಲ್ಲಿರುವ ಯಾವ ಅರ್ಹತೆಯೂ ಇಲ್ಲ.ಈ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು'ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಹೊಸ ಶಾಲೆಗಳನ್ನು ಆರಂಭಿಸಲು ಅಥವಾ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಹೆಚ್ಚುವರಿ ವಿಭಾಗಗಳನ್ನು ಹೊಂದಲು ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಇದೇ 25ರವರೆಗೆ ಅವಕಾಶ ನೀಡಿರುವ ಶಿಕ್ಷಣ ಇಲಾಖೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಜುಲೈ 31 ಕೊನೆಯ ದಿನ ಎಂದು ನಿಗದಿಪಡಿಸಿದೆ. ಇದು ಗೊಂದಲಕ್ಕೆ ಕಾರಣವಾಗಿದೆ’ ಎಂದು ರುಪ್ಸ ಆರೋಪಿಸಿತ್ತು.

ADVERTISEMENT

‘ಮಾನ್ಯತೆ ನೀಡುವ ಪ್ರಕ್ರಿಯೆ ಮುಗಿಸದೆ, ಅರ್ಜಿ ಸಲ್ಲಿಸಿದ ಶಾಲೆಗಳನ್ನು ಕಾನೂನುಬಾಹಿರ ಶಾಲೆಗಳೆಂದು ಘೋಷಿಸುವುದು ಇಲಾಖೆಯ ಮೂರ್ಖತನದ ಪರಮಾವಧಿ. ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದು, ಇದು ದ್ವಂದ್ವ ಹಾಗೂ ಬೇಜವಾಬ್ದಾರಿ ನಿಲುವು’ ಎಂದು ಸಂಘದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.