ADVERTISEMENT

ನೆರೆ ಸಮೀಕ್ಷೆಗೆ ಕಾಂಗ್ರೆಸ್‌ನಿಂದ ತಂಡ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:36 IST
Last Updated 6 ಆಗಸ್ಟ್ 2019, 19:36 IST

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ ಹಾಗೂ ನೆರೆಯಿಂದ ತತ್ತರಿಸಿರುವ ಕೃಷ್ಣಾ ನದಿ ಪಾತ್ರದ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲು ಕೆಪಿಸಿಸಿ ಎರಡು ತಂಡಗಳನ್ನು ರಚಿಸಲಿದೆ.

ಮುಖಂಡರಾದ ಎಚ್.ಕೆ.ಪಾಟೀಲ ಹಾಗೂ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಮಿತಿ ರಚಿಸಲು ಮಂಗಳವಾರ ನಿರ್ಧರಿಸಲಾಗಿದೆ.
ಪಾಟೀಲ ನೇತೃತ್ವದ ತಂಡ ಬೆಳಗಾವಿ ಭಾಗದಲ್ಲಿ ಮತ್ತು ಖಂಡ್ರೆ ನೇತೃತ್ವದ ತಂಡ ರಾಯಚೂರು ಭಾಗದಲ್ಲಿ ಅಧ್ಯಯನ ನಡೆಸಲಿದೆ.

ಇಬ್ಬರನ್ನೂ ದೂರವಾಣಿಯಲ್ಲಿ ಸಂಪರ್ಕಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ತಕ್ಷಣವೇ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ಸಲಹೆ ಮಾಡಿದ್ದಾರೆ.

ADVERTISEMENT

‘ಜನರಿಗೆ ತೊಂದರೆಯಾಗಿರುವ ಸಮಯದಲ್ಲಿ ಪ್ರತಿಪಕ್ಷವಾಗಿ ನಾವೂ ಸರ್ಕಾರಕ್ಕೆ ಸಲಹೆ, ಮಾಹಿತಿ ನೀಡುತ್ತೇವೆ. ಸರ್ಕಾರದ ಕಾರ್ಯ
ವೈಖರಿ, ಜನರಿಗೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎಂಬ ಬಗ್ಗೆಯೂ ಸಮಿತಿ ವರದಿ ನೀಡಲಿದೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇಂತಹ ತುರ್ತು ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿತ್ತು. ದುರ್ದೈವ ಎಂದರೆ ಸರ್ಕಾರದಲ್ಲಿ ಸಿ.ಎಂ ಅಷ್ಟೇ ಇದ್ದು, ಅವರೂ ದೆಹಲಿಗೆ ಹೋಗಿ ಕುಳಿತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.