ADVERTISEMENT

ಕೋವಿಡ್ | ಶೇ 96 ರಷ್ಟು ಪ್ರಕರಣಗಳು ಲಕ್ಷಣ ರಹಿತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 2:03 IST
Last Updated 3 ಜೂನ್ 2020, 2:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""
""

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ 4 ರಷ್ಟು ಮಂದಿಯಲ್ಲಿ ಮಾತ್ರ ಕೊರೊನಾ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಂಡಿವೆ. ಉಳಿದ ಶೇ 96 ರಷ್ಟು ಪ್ರಕರಣಗಳಲ್ಲಿ ಕೋವಿಡ್ ರೋಗ‌ ಲಕ್ಷಣವೇ ಇರಲಿಲ್ಲ. ಆದರೆ, ಪರೀಕ್ಷೆ ಬಳಿಕ ಸೋಂಕಿತರು ಎಂಬುದು ಬೆಳಕಿಗೆ ಬಂದಿದೆ.

ರಾಜ್ಯ ಕೋವಿಡ್‌–19 ವಾರ್ ರೂಮ್ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಪರೀಕ್ಷೆಗಳು ಹೆಚ್ಚಿದಂತೆ ಸೋಂಕಿತರ ಸಂಖ್ಯೆಯೂ ಅಧಿಕವಾಗುತ್ತಿದೆ. ರೋಗಿಗಳ ಸಂಪರ್ಕಕ್ಕಿಂತ ಅನ್ಯ ರಾಜ್ಯಗಳಿಂದ ಬಂದವರೇ ಹೆಚ್ಚಾಗಿ ಸೋಂಕಿತರಾಗುತ್ತಿದ್ದಾರೆ. ಅದರಲ್ಲೂ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.ಅತ್ಯಂತ ವೇಗವಾಗಿ ಹರಡುತ್ತಿರುವ ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ವ್ಯಕ್ತಿಗಳು ಪರಸ್ಪರ ಅಂತರ ಸೇರಿದಂತೆ ವಿವಿಧ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿಅನುಸರಿಸುವುದು ಅತ್ಯಗತ್ಯ. ರಾಜ್ಯದಲ್ಲಿ ಕಳೆದ ಐದು ದಿನಗಳಲ್ಲಿ ಪ್ರಕರಣಗಳ ಬೆಳವಣಿಗೆ ದರ ಶೇ 7.1 ರಷ್ಟಿದೆ. ಈ ಪ್ರಮಾಣ ರಾಯಚೂರಿನಲ್ಲಿ ಶೇ 25 ರಷ್ಟು ಇದೆ.

ರಾಜ್ಯದಲ್ಲಿ ಹೆಚ್ಚಾಗಿ 20ರಿಂದ 40 ವರ್ಷದೊಳಗಿನವರೇ ಸೋಂಕಿತರಾಗುತ್ತಿದ್ದಾರೆ. ಆದರೆ, ಮರಣದ ಪ್ರಮಾಣವನ್ನು ಗಮನಿಸಿದಲ್ಲಿ 40 ವರ್ಷ ಮೇಲ್ಪಟ್ಟವರ ಜೀವಕ್ಕೆ ಹೆಚ್ಚಿನ ಅಪಾಯವಿದೆ. ಈವರೆಗೆ ಮೃತಪಟ್ಟವರಲ್ಲಿ ಒಂದು ಪ್ರಕರಣವನ್ನು ಹೊರತುಪಡಿಸಿ, ಉಳಿದೆಲ್ಲವೂ 40 ವರ್ಷ ವಯಸ್ಸಿನ ಗಡಿ ದಾಟಿದೆ. ದೇಶದಲ್ಲಿ ಸರಾಸರಿ ಒಂದು ಕೋಟಿ ಜನರಲ್ಲಿ ಮರಣ ಪ್ರಮಾಣ ಶೇ 44.6 ರಷ್ಟು ಇದ್ದರೇ, ರಾಜ್ಯದಲ್ಲಿ ಈ ಪ್ರಮಾಣ ಶೇ 8.5 ರಷ್ಟಿದೆ. ದೆಹಲಿಯಲ್ಲಿ ಅತೀ ಹೆಚ್ಚು ಮಂದಿ (ಶೇ 282.3) ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.