ADVERTISEMENT

Covid-19 Karnataka Update | 50 ಸಾವಿರದತ್ತ ಗುಣಮುಖರ ಸಂಖ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2020, 19:32 IST
Last Updated 31 ಜುಲೈ 2020, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು:ಕೊರೊನಾ ಸೋಂಕಿತರಲ್ಲಿ ಶುಕ್ರವಾರ ಒಂದೇ ದಿನ 3 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 50 ಸಾವಿರದತ್ತ (49,788) ದಾಪುಗಾಲು ಇರಿಸಿದೆ.

ರಾಜ್ಯದಲ್ಲಿ 5,483 ಮಂದಿ ಹೊಸದಾಗಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1.24 ಲಕ್ಷಕ್ಕೆ ತಲುಪಿದೆ. ಸೋಂಕಿತರಲ್ಲಿ ಮತ್ತೆ 84 ಮಂದಿ ಮೃತಪಟ್ಟಿರುವುದು ಖಚಿತವಾಗಿದ್ದು, ಒಟ್ಟು ಮೃತರ ಸಂಖ್ಯೆ 2,314ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 72 ಸಾವಿರ ತಲುಪಿದೆ. ಒಂದೇ ದಿನ 22,164 ಆ್ಯಂಟಿಜೆನ್ ಸೇರಿದಂತೆ 36,936 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.ಬೆಂಗಳೂರಿನಲ್ಲಿ ಮತ್ತೆ 2,220 ಮಂದಿ ಸೋಂಕಿತರಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 55 ಸಾವಿರ ತಲುಪಿದೆ.ಬಳ್ಳಾರಿಯಲ್ಲಿ ಕೂಡ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಮತ್ತೆ 340 ಮಂದಿ ಸೋಂಕಿತರಾಗಿದ್ದಾರೆ. ಶುಕ್ರವಾರ ಖಚಿತಪಟ್ಟ ಮರಣ ಪ್ರಕರಣಗಳಲ್ಲಿ 12 ಮಂದಿ 50 ವರ್ಷದೊಳಗಿನವರಾಗಿದ್ದಾರೆ.

ರಾಜ್ಯದ ಕೋವಿಡ್ ಅಂಕಿ–ಅಂಶ

ADVERTISEMENT

1,24,115 ಒಟ್ಟು ಸೋಂಕಿತರು

ಶುಕ್ರವಾರ ದೃಢಪಟ್ಟ ಪ್ರಕರಣಗಳು; 5,483

ಸಕ್ರಿಯ ಪ್ರಕರಣಗಳು; 72,005

ಗುಣಮುಖರಾದವರು; 49,788

ಶುಕ್ರವಾರ ಗುಣಮುಖರಾದವರು; 3,130

ಒಟ್ಟು ಮೃತಪಟ್ಟವರು; 2,314

ಶುಕ್ರವಾರ ದೃಢಪಟ್ಟ ಸಾವು ಪ್ರಕರಣಗಳು; 84

ಐಸಿಯುನಲ್ಲಿ ಇರುವವರು; 609

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.