ADVERTISEMENT

Covid-19 Karnataka Update | 15 ಸಾವಿರ ದಾಟಿದ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 17:45 IST
Last Updated 30 ಜೂನ್ 2020, 17:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಸಂಜೆ 5 ಗಂಟೆ ನಡುವಣ ಅವಧಿಯಲ್ಲಿ ರಾಜ್ಯದಲ್ಲಿ 947 ಹೊಸ ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. 20 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದರೊಂದಿಗೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ. ಈವರೆಗೆ 246 ಜನ ಮೃತಪಟ್ಟಿದ್ದಾರೆ. ಇಂದು 235 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದರೆ, ಒಟ್ಟು 7918 ಮಂದಿ ಈವರೆಗೆ ಚೇತರಿಸಿಕೊಂಡಿದ್ದಾರೆ. ಸದ್ಯ 7074 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಅತಿಹೆಚ್ಚು, ಅಂದರೆ 503 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ, ನಗರದಲ್ಲಿ ಸೋಂಕಿತರ ಸಂಖ್ಯೆ 4555 ತಲುಪಿದೆ. 95 ಸಾವು ಸಂಭವಿಸಿದೆ. 543 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3916 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಉಳಿದಂತೆ, ಬಳ್ಳಾರಿಯಲ್ಲಿ 61, ಹಾವೇರಿಯಲ್ಲಿ 49, ದಕ್ಷಿಣ ಕನ್ನಡದಲ್ಲಿ 44, ಉತ್ತರ ಕನ್ನಡದಲ್ಲಿ 40, ವಿಜಯಪುರ 39, ಶಿವಮೊಗ್ಗದಲ್ಲಿ 22, ಬೆಂಗಳೂರು ಗ್ರಾಮಾಂತರದಲ್ಲಿ 21, ಬೀದರ್–ಧಾರವಾಡದಲ್ಲಿ ತಲಾ 17, ಹಾಸನ 16, ಕಲಬುರಗಿ–ರಾಯಚೂರು ತಲಾ 15, ಚಿಕ್ಕಬಳ್ಳಾಪುರ 13, ದಾವಣಗೆರೆ–ರಾಮನಗರ ತಲಾ 12, ಚಿಕ್ಕಮಗಳೂರು 10, ಉಡುಪಿ–ಚಿಕ್ಕಮಗಳೂರು ತಲಾ 9, ಬಾಗಲಕೋಟೆ–ಕೊಡಗು ತಲಾ 4, ಕೋಲಾರ, ಚಿತ್ರದುರ್ಗ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗ ತಲಾ 2, ತುಮಕೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.