ADVERTISEMENT

ವಿಧಾನ ಪರಿಷತ್ ಬೆಂಗಳೂರು ನಗರ ಕ್ಷೇತ್ರ : ಜೋರಾಗಿದೆ ದುಪ್ಪಟ್ಟಿನ ಮಾತು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 23:00 IST
Last Updated 7 ಡಿಸೆಂಬರ್ 2021, 23:00 IST
   

ಬೆಂಗಳೂರು: ರಾಜ್ಯ ರಾಜಧಾನಿಯನ್ನು ಪ್ರತಿನಿಧಿಸುವ ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ಇಲ್ಲಿ ಪ್ರತಿ ಬಾರಿಯೂ ಚುನಾವಣೆಯ ಮೇಲೆ ರಾಜ್ಯದ ಇತರೆಡೆಗಿಂತ ಹೆಚ್ಚು ಹಣದ ಪ್ರಭಾವ ಇರುತ್ತದೆ. ಈ ಬಾರಿ ಕಾದು ನೋಡುವ ತಂತ್ರದ ಮೊರೆ ಹೋಗಿರುವ ಅಭ್ಯರ್ಥಿಗಳು ‘ದುಪ್ಪಟ್ಟು’ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಜಮೀನಿನ ಮೌಲ್ಯ ಹೆಚ್ಚಿರುವ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಮತದ ಮೌಲ್ಯವೂ ಹೆಚ್ಚು. ಕಳೆದ ಚುನಾವಣೆಯಲ್ಲೇ ಲಕ್ಷ ರೂಪಾಯಿಗಳ ಲೆಕ್ಕದಲ್ಲಿ ಮತಗಳು ಬಿಕರಿಯಾಗಿದ್ದವು. ಈ ಬಾರಿ ಒಬ್ಬರು ನೀಡುವ ಮೊತ್ತದ ಎರಡರಷ್ಟು ನೀಡುವುದಾಗಿ ಇನ್ನೊಬ್ಬರು ಹೇಳುತ್ತಿದ್ದಾರೆ. ಮತದಾನದ ಹಿಂದಿನ ದಿನವೇ ಎಲ್ಲವೂ ಅಂತಿಮಗೊಳ್ಳಬಹುದು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT