ADVERTISEMENT

ಕೋವಿಡ್-19: ಬೆಂಗಳೂರು ಪೊಲೀಸರ ಜಾಗೃತಿ ವಿಡಿಯೊ

​ಪ್ರಜಾವಾಣಿ ವಾರ್ತೆ
Published 4 ಮೇ 2021, 6:17 IST
Last Updated 4 ಮೇ 2021, 6:17 IST
   

ಬೆಂಗಳೂರು: ಕೊರೊನಾ‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಗ್ಗೆ ಜನರು ಜಾಗೃತಿಯಿಂದ ಇರಬೇಕು ಎಂದು ಕೋರಿ ನಗರ ಕಮಿಷನರೇಟ್ ವತಿಯಿಂದ ವಿಡಿಯೊ ಬಿಡುಗಡೆ ಮಾಡಲಾಗಿದೆ.

'ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು, ಸರ್ಕಾರ ರೂಪಿಸಿರುವ‌ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದು ಕಮಿಷನರ್ ಕಮಲ್ ಪಂತ್ ಕೋರಿದ್ದಾರೆ.

ಕಾನ್‌ಸ್ಟೆಬಲ್‌ನಿಂದ ಹಿಡಿದು ಕಮಿಷನರ್‌ವರೆಗೂ ಎಲ್ಲರೂ ವಿಡಿಯೊದಲ್ಲಿ ಜಾಗೃತಿ ಮಾತುಗಳನ್ನಾಡಿದ್ದಾರೆ.

ADVERTISEMENT

ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಸೌಮೆಂದು ಮುಖರ್ಜಿ, ಮುರುಗನ್, ಜಂಟಿ‌ ಕಮಿಷನರ್‌ಗಳಾದ ಸಂದೀಪ್ ಪಾಟೀಲ, ಬಿ.ಆರ್. ರವಿಕಾಂತೇಗೌಡ ಹಾಗೂ ಹಲವರು ವಿಡಿಯೊದಲ್ಲಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಯೂಟ್ಯೂಬ್, ಟ್ವಿಟರ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.