ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 37,733 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದ್ದು,217 ಮಂದಿ ಮೃತಪಟ್ಟಿದ್ದಾರೆ.ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 16,01,865 ಕ್ಕೆ ಏರಿಕೆಯಾಗಿದೆ. ಒಟ್ಟಾರೆ 16,011 ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಈವರೆಗೆ 11,64,398 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 4,21, 436 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇಂದು ಗುಣಮುಖರಾಗಿ 21,149 ಜನರು ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಹೊಸದಾಗಿ 21,199 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 5,08,923 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,97,292 ಕ್ಕೆ ಏರಿಕೆಯಾಗಿದೆ. ಇಂದು 64 ಜನರು ಮೃತಪಟ್ಟಿದ್ದು, ಈವರೆಗೂ 6,601 ಮಂದಿ ಸಾವಿಗೀಡಾಗಿದ್ದಾರೆ.
ಬಾಗಲಕೋಟೆಯಲ್ಲಿ 691, ಬಳ್ಳಾರಿ 1156, ಬೆಳಗಾವಿ 372, ಬೆಂಗಳೂರು ಗ್ರಾಮಾಂತರ 286, ಬೀದರ್ 584, ಚಾಮರಾಜನಗರ 271, ಚಿಕ್ಕಬಳ್ಳಾಪುರ 446, ಚಿಕ್ಕಮಗಳೂರು 166, ಚಿತ್ರದುರ್ಗ 152, ದಕ್ಷಿಣ ಕನ್ನಡ 996, ದಾವಣಗೆರೆ 317, ಧಾರವಾಡ 741, ಗದಗ 118, ಹಾಸನ 792, ಹಾವೇರಿ 157, ಕಲಬುರಗಿ 427, ಕೊಡಗು 246, ಕೋಲಾರ 282, ಕೊಪ್ಪಳ 567, ಮಂಡ್ಯ 653, ಮೈಸೂರು 2750, ರಾಯಚೂರು 445, ರಾಮನಗರ 441, ಶಿವಮೊಗ್ಗ 620, ತುಮಕೂರು 1302, ಉಡುಪಿ 413, ಉತ್ತರ ಕನ್ನಡ 538, ವಿಜಯಪುರ 303 ಮತ್ತು ಯಾದಗಿರಿಯಲ್ಲಿ 303 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.