ADVERTISEMENT

ಕೋವಿಡ್–19 | ಮಧ್ಯಾಹ್ನ ಪಾಸಿಟಿವ್, ಸಂಜೆ ನೆಗೆಟಿವ್

ಇ.ಎಸ್.ಸುಧೀಂದ್ರ ಪ್ರಸಾದ್
Published 18 ಜುಲೈ 2020, 22:04 IST
Last Updated 18 ಜುಲೈ 2020, 22:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಕೋವಿಡ್–19 ದೃಢಪಟ್ಟಿದೆ ಎಂದು ಮಧ್ಯಾಹ್ನ ಕರೆ ಮಾಡಿ ಮನೆ ಬಳಿ ಸಿಬ್ಬಂದಿ ಕಳುಹಿಸಿದ್ದ ಆರೋಗ್ಯ ಇಲಾಖೆ, ಸಂಜೆ ಹೊತ್ತಿಗೆ ಸೋಂಕು ಇಲ್ಲ ಎಂದು ಸಂದೇಶವನ್ನಷ್ಟೇ ಕಳುಹಿಸಿದ ಪರಿಣಾಮ ಬಡಾವಣೆಯ ಜನರು ಅವರನ್ನು ಅನುಮಾನದಿಂದ ನೋಡುವಂತಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡದ ಡಿಪೊದಲ್ಲಿ ನಿರ್ವಾಹಕರಾಗಿರುವವರೇ ಸಂಕಷ್ಟಕ್ಕೆ ಸಿಲುಕಿರುವವರು.

ಹೆಬ್ಬಳ್ಳಿ ಅಗಸಿಯಲ್ಲಿ ಸ್ನೇಹಿತರೊಬ್ಬರೊಂದಿಗೆ ಹೋಂ ಕ್ವಾರಂಟೈನ್ ಆಗಿರುವ ಇವರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಜುಲೈ 17ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕರೆ ಮಾಡಿದ್ದರು. ಮನೆ ಹತ್ತಿರ ಸಿಬ್ಬಂದಿ ಕಳುಹಿಸಿ ಆಂಬುಲೆನ್ಸ್‌ಗಾಗಿ ಕಾಯುವಂತೆ ಸೂಚಿಸಿದ್ದರು. ಆದರೆ, ಸಂಜೆ ಪಾಸಿಟಿವ್ ಅಲ್ಲ ಎಂದು ಸಂದೇಶ ಕಳುಹಿಸಿ ಕೈತೊಳೆದುಕೊಂಡಿದ್ದಾರೆ.

ADVERTISEMENT

ಈ ಕುರಿತಂತೆ ಮಾಹಿತಿಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.